ದಿಲ್ಲಿಯಲ್ಲಿ ಲಾಕ್‌ಡೌನ್ ಮತ್ತೆ ವಿಸ್ತರಣೆ:ಅರವಿಂದ ಕೇಜ್ರಿವಾಲ್

ಹೊಸದಿಲ್ಲಿ: ದಿಲ್ಲಿಯ ಲಾಕ್‌ಡೌನ್ ಅನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದ್ದು, ದೈನಂದಿನ ಕೋವಿಡ್ ಸಂಖ್ಯೆಗಳು ಇಳಿಕೆಯಾದರೆ ಅನ್ ಲಾಕ್ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ನಗರವು ಸಕಾರಾತ್ಮಕ ದರವನ್ನು ತಗ್ಗಿಸಲು ಹೆಣಗಾಡುತ್ತಿರುವಾಗ ಎಚ್ಚರಿಕೆ ಅಗತ್ಯ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ಹೇಳಿದ್ದಾರೆ.
"ಈ ಅಲೆಯು ಎಷ್ಟು ಕಾಲ ಉಳಿಯಬಹುದೆಂದು ನಮಗೆ ತಿಳಿದಿಲ್ಲ. ಆದರೆ ಒಂದು ತಿಂಗಳ ಕಾಲ ದಿಲ್ಲಿಯ ಜನರು ಸಹಕರಿಸಿದರು. ಆಮ್ಲಜನಕ ತುರ್ತು ಪರಿಸ್ಥಿತಿ ಇದ್ದಾಗಲೂ ಕೂಡ ದಿಲ್ಲಿಯು ಒಂದು ಕುಟುಂಬದಂತೆ ವೈರಸ್ ವಿರುದ್ಧ ಹೋರಾಡಿದೆ ಈಗ ಒಂದು ತೀವ್ರವಾದ ಲಸಿಕೆ ಕೊರತೆ. ಇದೆ ಆದರೆ ಇದಕ್ಕೂ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ನಾನು ನಂಬುತ್ತೇನೆ "ಎಂದು ಅವರು ಹೇಳಿದರು.
Next Story