ಎಮ್ ಎನ್ ಜಿ ಫೌಂಡೇಶನ್ ವತಿಯಿಂದ ಕೋವಿಡ್ ಕಿಟ್ ವಿತರಣೆ

ಮಂಗಳೂರು: ಕೊರೋನ ಎರಡನೇ ಅಲೆಗೆ ಸಿಲುಕಿ ಲಾಕ್ ಡೌನ್ ನಿಂದ ಜಿಲ್ಲೆಯ ವಿವಿಧೆಡೆಯಲ್ಲಿ ಹಲವು ಕುಟುಂಬಗಳು ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಜಿಲ್ಲೆಯ ಪ್ರತಿಷ್ಠಿತ ಸೇವಾ ಸಂಸ್ಥೆಗಳಲ್ಲಿ ಒಂದಾದ ಎಮ್ ಎನ್ ಜಿ ಫೌಂಡೇಶನ್ ಮಂಗಳೂರು ಸಂಸ್ಥೆಯು ವಿವಿಧ ವಿಭಾಗಗಳನ್ನು ರಚಿಸಿಕೊಂಡು ನಿರಂತರ ಸಂಕಷ್ಟದಲ್ಲಿರುವ ಜನರ ಸೇವೆಗೈಯ್ಯುತ್ತಿದೆ.
ದಾನಿಗಳ ಮೂಲಕ ಸಂಗ್ರಹಿಸಿದ ಕೋವಿಡ್ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಪಾವೂರು ಪೋಡಾರ್ ಸೈಟ್, ಹರೇಕಳ ಕಡವಿನಬಳಿ, ಪಾವೂರು ದೋಟ ಭಾಗದ ಅರ್ಹ ಕುಟುಂಬಗಳಿಗೆ ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯ ಸ್ಥಾಪಕರಾದ ಇಲ್ಯಾಸ್ ಮಂಗಳೂರು ಹಾಗೂ ಸಂಸ್ಥೆಯ ಇತರ ಸದಸ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬದ್ರುದ್ದೀನ್ ಫರೀದ್ ನಗರ, ಶಾಕಿರ್ ಪಾವೂರು, ಸತೀಶ್ ಕಡವಿನಬಳಿ, ನಿಸಾರ್ ಉಂಬುದ, ನಿಝಾಮ್ ದೆಬ್ಬೇಲಿ, ಅಶೋಕ್ ಮೊಂತೇರು, ನಿಯಾಝ್ ಅಲ್ ನಿಸಾರ್, ತಸ್ಲೀಮ್ ಹರೇಕಳ ಹಾಗೂ ಅಭಿಷೇಕ್ ಕಡವಿನಬಳಿ ಉಪಸ್ಥಿತರಿದ್ದರು.







.jpeg)


