ಉಳ್ಳಾಲ: ಅವಘಡಕ್ಕೀಡಾದ ಮೀನುಗಾರಿಕೆ ಬೋಟ್; 10 ಮಂದಿಯ ರಕ್ಷಣೆ
ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಬೋಟ್ ವೊಂದು ಅವಘಡಕ್ಕೀಡಾಗಿ ದಡಕ್ಕೆ ಅಪ್ಪಳಿಸಿದ ಘಟನೆ ರವಿವಾರ ಉಳ್ಳಾಲ ಸೋಲಾರ್ ಕ್ಲಬ್ ಬಳಿ ನಡೆದಿದ್ದು, ಬೋಟ್ ನಲ್ಲಿದ್ದ 10 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಉಳ್ಳಾಲ ಕೋಟೆಪುರದ ಅಶ್ರಫ್ ಹಾಗೂ ಫಾರೂಕ್ ಎಂಬವರಿಗೆ ಸೇರಿದ ಅಝಾನ್ ಹೆಸರಿನ ಬೋಟ್ ಶನಿವಾರ ತಡರಾತ್ರಿ ಮಂಗಳೂರಿನ ದಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟಿತ್ತು. ಇಂದು ನಸುಕಿನ ವೇಳೆ ಬೋಟ್ ಉಳ್ಳಾಲ ಕೋಡಿ ಮೊಗವೀರ ಪಟ್ಣ ಮಧ್ಯೆ ಇರುವ ಸೋಲಾರ್ ಕ್ಲಬ್ ಸಮೀಪ ಸಮುದ್ರ ದಡಕ್ಕೆ ಅಪ್ಪಳಿಸಿ ನಿಂತಿದೆ. ಇದರಿಂದ ಬೋಟ್ ಗೆ ಹಾನಿಯಾಗಿದ್ದು, ಈ ವೇಳೆ ಅದರಲ್ಲಿದ್ದ ಮೀನುಗಾರ ರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
Next Story





