ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಶ್ರೀಕುಮಾರ್ ಬಾನರ್ಜಿ ನಿಧನ
ಮುಂಬೈ, ಮೇ 23: ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ ರವಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
70 ವರ್ಷ ವಯಸ್ಸಿನ ಬ್ಯಾನರ್ಜಿ ಕಳೆದ ತಿಂಗಳಷ್ಟೇ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿದ್ದರು. ಇಂದು ಅವರು ನಸುಕಿನ ವೇಳೆ ನಸುಕಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಶ್ರೀಕುಮಾರ್ ಅವರು ಅಣುಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, 2012ರಲ್ಲಿ ನಿವೃತ್ತರಾಗಿದ್ದರು. 2010ರವರೆಗೆ ಅವರು ಆರು ವರ್ಷಗಳ ಕಾಲ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ (ಬಿಎಆರ್ಸಿ)ದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.
ತನ್ನ ಸೇವಾವಧಿಯಲ್ಲಿ ಶ್ರೀಕುಮಾರ್ ಬ್ಯಾನರ್ಜಿ ಅವರು 2005ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ 1989ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪುರಸ್ಕಾರ ಸೇರಿದಂತೆ ಹಲವಾರು ಪುರಸ್ಕಾರಗಳ್ನು ಪಡೆದಿದ್ದರು.
Next Story





