Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ24 May 2021 12:10 AM IST
share
ಓ ಮೆಣಸೇ...

ವರದಿ ನೆಗೆಟಿವ್ ಇರಲಿ, ಮನಸ್ಸು ಪಾಸಿಟಿವ್ ಇರಲಿ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ನೆಗೆಟಿವ್‌ಗಳನ್ನು ಬಿತ್ತಿ ಪಾಸಿಟಿವ್‌ಗಳನ್ನು ಕೊಯ್ಯಲು ಹೊರಟರೆ ಹೇಗೆ?


ಪ್ರಾಯೋಜಕತ್ವ ಸಿಕ್ಕರೆ ಎಲ್ಲ ಜಿಲ್ಲೆಗಳಲ್ಲಿ ಆಕ್ಸಿಜನ್ ಬಸ್ ಸೇವೆ ನೀಡಲು ಸಿದ್ಧ - ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
ಮತ್ತೆ ಸರಕಾರ ಇರುವುದು ಯಾಕೆ?


 ಕೊರೋನ ಸೋಂಕಿತರ ಮರಣ ಪ್ರಮಾಣವನ್ನು ಕಡಿಮೆ ಮಾಡಿದರೆ ವೈದಾಧಿಕಾರಿಗಳ ಪಾದ ತೊಳೆಯುವೆ - ವಿ.ಸೋಮಣ್ಣ , ಸಚಿವ
ಮೊದಲು ನಿಮ್ಮ ಕಿವಿ ತೊಳೆದುಕೊಳ್ಳಿ. ವೈದ್ಯರಿಗೆ ಬೇಕಾಗಿರುವ ಸೌಕರ್ಯಗಳನ್ನು ಒದಗಿಸಿಕೊಡಿ.


ಪಿಎಂ ಕೇರ್ಸ್‌ನಿಂದ ಒದಗಿಸಲಾಗಿರುವ ವೆಂಟಿಲೇಟರ್‌ಗಳು ಕೆಲಸಕ್ಕೆ ಬಾರದ ಡಬ್ಬಗಳಂತಾಗಿವೆ - ಎಚ್.ಕೆ ಪಾಟೀಲ್, ಶಾಸಕ
ಖಾಲಿ ಡಬ್ಬ ಸದ್ದು ಮಾಡುತ್ತಿರುವುದು ಇದೇ ಕಾರಣಕ್ಕಿರಬೇಕು.


ಕೊರೋನ ಪರೀಕ್ಷೆ ಹಾಗೂ ಸೋಂಕಿತರ ಸಾವಿನ ವಿಚಾರದಲ್ಲಿ ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಯಾವ ವಿಚಾರದಲ್ಲಿ ಸರಕಾರ ನಿಜ ಹೇಳಿದೆ ಎನ್ನುವುದನ್ನು ಮೊದಲು ಹೇಳಿ.


ಬೆಳಗಾವಿ ಲೋಕಸಭಾ ಚುನಾವಣೆಯನ್ನು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ನಾವು ಉತ್ತಮ ಯಶಸ್ಸು ಸಾಧಿಸಿದ್ದೇವೆ- ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಹಿಂದಿನ ಸೋಲಿಗೆ ಹೋಲಿಸಿದರೆ ಈ ಬಾರಿಯ ಸೋಲು ತೃಪ್ತಿಕರವಾಗಿರಬೇಕು.


ಯೋಗಿ ಆದಿತ್ಯನಾಥ್ ಪಂಜಾಬ್‌ನ ಕೊರೋನ ಪರಿಸ್ಥಿತಿ ಬಗ್ಗೆ ಮೂಗು ತೂರಿಸುವ ಬದಲು ಅವರ ರಾಜ್ಯದ ಪರಿಸ್ಥಿತಿಯತ್ತ ಗಮನ ಹರಿಸುವುದು ಒಳ್ಳೆಯದು - ಅಮರಿಂದರ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ
ಉತ್ತರ ಪ್ರದೇಶದಲ್ಲಿ ಕೊರೋನ ದಮನವನ್ನು ಪೊಲೀಸರ ಲಾಠಿಗಳಿಗೆ ವಹಿಸಿ ಬಿಟ್ಟಿದ್ದಾರೆ. 


ಪ್ರತಿ ದಿನ ಗೋಮೂತ್ರ ಸೇವಿಸುತ್ತಿರುವುದರಿಂದ ನಾನು ಕೋವಿಡ್ ಸೋಂಕಿಗೆ ಒಳಗಾಗಿಲ್ಲ- ಪ್ರಜ್ಞಾಸಿಂಗ್ ಠಾಕೂರ್, ಸಂಸದೆ
ನಿಮ್ಮಳಗಿರುವ ಕೋಮು ವಿಷ ವೈರಸ್‌ನ ಮುಂದೆ ಕೊರೋನ ವೈರಸ್ ಏನೇನೂ ಅಲ್ಲ ಬಿಡಿ. 


ಅತ್ತೆಯ ಒಡವೆ ಅಳಿಯ ದಾನ ಮಾಡಿದಂತೆ ಪ್ರಧಾನಿ ಮೋದಿಯ ನಡೆ - ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡ
ದಾನ ಮಾಡಿರುವುದೋ, ಮಾರಿದ್ದೋ ಎನ್ನುವುದನ್ನೊಮ್ಮೆ ಪರಿಶೀಲಿಸಿ.


ಮನೆಗೆ ಮಗನೂ ಆಗಲಿಲ್ಲ ಸ್ಮಶಾನಕ್ಕೆ ಹೆಣವೂ ಆಗಲಿಲ್ಲ ಎಂಬ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ - ಸಿ.ಟಿ.ರವಿ, ಶಾಸಕ
ಬಹುಶಃ ನಿಮ್ಮ ಸರಕಾರದಿಂದ ಜನರು ಸ್ಮಶಾನಗಳಿಗೆ ಹೆಣವಂತೂ ಆಗುತ್ತಿದ್ದಾರೆ.


ದೇಶದ ಘನತೆ ಹಾಳು ಮಾಡಲು ಕಾಂಗ್ರೆಸ್ ಯಾವ ಮಾರ್ಗವನ್ನೂ ಬಿಟ್ಟಿಲ್ಲ -ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ
ಅದಕ್ಕಾಗಿ ಪ್ರಧಾನಿಯವರೇ ಹಗಲಿರುಳು ದುಡಿಯುತ್ತಿರುವಾಗ ಕಾಂಗ್ರೆಸ್‌ನ ಅಗತ್ಯವಿದೆಯೇ?


ನನ್ನ ಪ್ರಕಾರ ಪಿಚ್‌ಗೆ ಇಳಿಯುವ ಎಷ್ಟೋ ಮೊದಲೇ ಆಟ ಶುರುವಾಗಿರುತ್ತದೆ- ಸಚಿನ್ ತೆಂಡುಲ್ಕರ್, ಮಾಜಿ ಕ್ರಿಕೆಟಿಗ
ಆಟ ಮುಗಿಯುವ ಮೊದಲು ಕೊರೋನ ಪಿಚ್‌ಗೆ ಇಳಿದು ಬ್ಯಾಟಿಂಗ್ ಶುರು ಮಾಡಬಾರದೇ?


ರಾಜ್ಯ ಸರಕಾರದ ನೇರ ಖರೀದಿ ಮೂಲಕ ಎರಡು ಲಕ್ಷ ಕೋವಿಶೀಲ್ಡ್ ಲಸಿಕೆಗಳು ಬರಲಿದ್ದು, ಅವುಗಳನ್ನು ಆನಂದ್ ರಾವ್ ವೃತ್ತದ ಬಳಿಯ ಉಗ್ರಾಣದಲ್ಲಿಡಲಾಗುವುದು - ಡಾ.ಕೆ.ಸುಧಾಕರ್, ಸಚಿವ
ಉಗ್ರಾಣದಲ್ಲಿ ಕೆಟ್ಟು ಹೋಗಿರುವ ಕೋವ್ಯಾಕ್ಸಿನ್‌ನ್ನು ಏನು ಮಾಡುತ್ತೀರಿ?


ಜಿಲ್ಲೆಗಳು ‘ಕೊರೋನ ಗೆದ್ದರೆ ದೇಶವೇ ಗೆದ್ದಂತೆ’- ನರೇಂದ್ರ ಮೋದಿ, ಪ್ರಧಾನಿ
ಒಟ್ಟು ಕೊರೋನ ಗೆಲ್ಲುವ ಹೊಣೆಯನ್ನು ಜಿಲ್ಲಾಡಳಿತದ ತಲೆಗೆ ಕಟ್ಟಿ ನೀವು ಬಚಾವಾಗುತ್ತಿದ್ದೀರಿ.


ಕೋಟ್ಯಧಿಪತಿಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ, ಆ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಬೇಕು - ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾಮಠ
ಲಾಕ್‌ಡೌನ್ ಘೋಷಿಸಿ ಜನರಿಂದ ದಂಡ ವಸೂಲಿ ಮಾಡಿ ಕೋಟ್ಯಧಿಪತಿಗಳಿಗೆ ಹಂಚಲಾಗುವುದು ಎಂದರಂತೆ ಪ್ರಧಾನಿ.


ಸದ್ಯ ಬೆಡ್ ಕೊರತೆ ನಿಯಂತ್ರಣಕ್ಕೆ ಬರುತ್ತಿದೆ- ಬಸವರಾಜ ಬೊಮ್ಮಾಯಿ, ಸಚಿವ
ಜನರ ಬ್ರೆಡ್ ಕೊರತೆಯ ಬಗ್ಗೆಯೂ ಒಂದಿಷ್ಟು ಯೋಚಿಸಿ.


ಕೋವಿಡ್ ನಿಯಂತ್ರಣಕ್ಕೆ ಮುಂದಿನ ವಾರ ಇನ್ನಷ್ಟು ಕಠಿಣ ನಿಯಮ ಜಾರಿ ಮಾಡಲು ಉದ್ದೇಶಿಸಲಾಗಿದೆ- ಆರ್.ಅಶೋಕ್, ಸಚಿವ
ಕಠಿಣ ಕ್ರಮ ಕೊರೋನ ವಿರುದ್ಧವೋ, ಜನರ ವಿರುದ್ಧವೋ?


ಹಳ್ಳಿ ಹಳ್ಳಿಗೂ ಕೊರೋನ ಹಬ್ಬಿರುವುದರಿಂದ ಬಿಗಿಯಾದ ಲಾಕ್‌ಡೌನ್ ಅಗತ್ಯವಿದೆ - ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ
ಹಳ್ಳಿಯನ್ನೂ ನೆಮ್ಮದಿಯಲ್ಲಿರಲು ಬಿಡುವುದಿಲ್ಲವೇ?


ಪ್ರಧಾನಿ ಮೋದಿ ಒಕ್ಕೂಟ ತತ್ವವನ್ನು ಗಾಳಿಗೆ ತೂರಿ ಮುಖ್ಯಮಂತ್ರಿಗಳನ್ನು ಅವಮಾನಿಸುತ್ತಿದ್ದಾರೆ- ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ಕ್ಕೂಟಗಳನ್ನು ಒಡೆಯುವುದೇ ಅವರ ತತ್ವವಿರಬೇಕು.


ಕೊರೋನ ಲಸಿಕೆ ಒಂದು ಡೋಸ್ ವ್ಯರ್ಥಗೊಳಿಸಿದರೂ ಒಬ್ಬ ವ್ಯಕ್ತಿಯ ಜೀವನ ಸುರಕ್ಷತೆಯನ್ನು ವಂಚಿಸಿದಂತೆ - ನರೇಂದ್ರ ಮೋದಿ, ಪ್ರಧಾನಿ
ಕೊರೋನ ಹೋರಾಟದಲ್ಲಿ ನೀವು ಒಂದು ವರ್ಷವನ್ನು ವ್ಯರ್ಥಗೊಳಿಸಿರುವುದು?


ಒಪ್ಪಂದ ಮಾಡಿಕೊಂಡರೂ ಚೀನಾ ಕುತಂತ್ರ ಮಾಡುತ್ತಿರುವುದರಿಂದ ಭಾರತ- ಚೀನಾ ಸಂಬಂಧ ಇನ್ನೂ ಸರಿಯಾಗಿಲ್ಲ - ಜೈ ಶಂಕರ್, ಕೇಂದ್ರ ಸಚಿವ
ಹೆಚ್ಚಿರುವ ಕೊರೋನದ ಹಿಂದೆಯೂ ಚೀನಾ ಕುತಂತ್ರವಿರಬಹುದೇ?


ನಾವೀಗ ಕೊರೋನ 3ನೇ ಅಲೆ ಎದುರಿಸಲು ಸಜ್ಜಾಗಿದ್ದೇವೆ- ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
ಹಾಗಾದರೆ ಎರಡನೇ ಅಲೆಯನ್ನು ಯಾರು ಎದುರಿಸಬೇಕು?


ಕೊರೋನ 2ನೇ ಅಲೆಯಲ್ಲಿ ಸಂಭವಿಸುತ್ತಿರುವ ಪ್ರಾಣ ಹಾನಿಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ - ನಳಿನ್ ಕುಮಾರ್ ಕಟೀಲು, ಸಂಸದ
ಕಾಂಗ್ರೆಸ್ ರಾಜೀನಾಮೆ ನೀಡಿ, ಸರಕಾರವನ್ನು ವಿಸರ್ಜಿಸಬೇಕು.


ಬಿಎಸ್‌ವೈ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಉಪ್ಪಿನಕಾಯಿಯನ್ನು ಮೂರನೇ ಅಲೆಗೆ ತೆಗೆದಿಟ್ಟಿದ್ದಾರಂತೆ.


ಪಕ್ಕದ ಮನೆಗೆ ಬೆಂಕಿ ಬಿದ್ದಾಗ ಆರಿಸುವ ಬದಲು ಕಾಂಗ್ರೆಸ್‌ನವರು ಚಳಿ ಕಾಯಿಸಿಕೊಳ್ಳ್ಳುವ ಕೆಲಸ ಮಾಡುತ್ತಿದ್ದಾರೆ - ಶ್ರೀರಾಮುಲು, ಸಚಿವ
ಸ್ವಂತ ಮನೆಗೆ ಬೆಂಕಿ ಹಾಕಿ ಚಳಿ ಕಾಯಿಸುವ ಬಿಜೆಪಿಗಿಂತ ವಾಸಿ 

share
ಪಿ.ಎ.ರೈ
ಪಿ.ಎ.ರೈ
Next Story
X