ಅಲೋಪಥಿ ಕುರಿತ ಆಕ್ಷೇಪಾರ್ಹ ಹೇಳಿಕೆ ಹಿಂಪಡೆದ ರಾಮ್ ದೇವ್

ಹೊಸದಿಲ್ಲಿ: ಅಲೋಪಥಿ ಔಷಧಿ ಹಾಗೂ ಆಧುನಿಕ ವೈದ್ಯಕೀಯ ಚಿಕಿತ್ಸೆಯ ಕುರಿತು ತಾನು ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಯೋಗ ಗುರು ರಾಮ್ ದೇವ್ ಅವರು ರವಿವಾರ ಹೇಳಿದ್ದಾರೆ.
ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸೆಗಳಿಂದ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ರಾಮ್ ದೇವ್ ಹೇಳಿದ್ದರು. ಅವರ ಈ ಹೇಳಿಕೆ ಭಾರಿ ವಿವಾದ ಉಂಟು ಮಾಡಿದ ನಂತರ ಹೇಳಿಕೆಯನ್ನು ಹಿಂಪಡೆದಿದ್ದಾರೆ.
" ಡಾ. ಹರ್ಷ ವರ್ಧನ್ ಅವರೇ ನಿಮ್ಮ ಪತ್ರವನ್ನು ಸ್ವೀಕರಿಸಿದ್ದೇನೆ. ಆ ಸಂದರ್ಭದಲ್ಲಿ ಹಾಗೂ ವಿವಿಧ ಚಿಕಿತ್ಸೆಗಳ ಸಂಘರ್ಷದ ಬಗ್ಗೆ ಸಂಪೂರ್ಣ ವಿವಾದವನ್ನು ವಿಷಾದದಿಂದ ಕೊನೆಗೊಳಿಸುವೆ. ನಾನು ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ,
ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡ ಕೆಲವೇ ಗಂಟೆಗಳ ನಂತರ ರಾಮ್ ದೇವ್ ಈ ಟ್ವೀಟ್ ಮಾಡಿದ್ದಾರೆ.
Next Story





