ಸಲಿಂಗ ವಿವಾಹ ಮಾನ್ಯತೆ ಕೋರಿ ಮನವಿ ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದ ದಿಲ್ಲಿ ಹೈಕೋರ್ಟ್
"ವಿವಾಹ ಪ್ರಮಾಣ ಪತ್ರ ಇಲ್ಲದೇ ಇದ್ದರೆ ಯಾರೊಬ್ಬರೂ ಸಾಯಲಾರರು"

ಹೊಸದಿಲ್ಲಿ, ಮೇ 24: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ಕೋರಿ ದಿಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಮನವಿಗಳ ಗುಚ್ಛದ ತುರ್ತು ವಿಚಾರಣೆಗೆ ಕೇಂದ್ರ ಸರಕಾರ ಸೋಮವಾರ ವಿರೋಧ ವ್ಯಕ್ತಪಡಿಸಿದೆ.
ಕೊರೋನ ಸೋಂಕಿನ ವಿನಾಶಕಾರಿ ಎರಡನೇ ಅಲೆಯ ನಡುವೆ ನೈಜ ತುರ್ತು ವಿಷಯಗಳಿಗೆ ಮಾತ್ರ ಕೇಂದ್ರ ಸರಕಾರ ಗಮನ ಹರಿಸುತ್ತಿದೆ. ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಪಾದಿಸಿದ್ದಾರೆ.
‘‘ಆಸ್ಪತ್ರೆಗಳಿಗೆ ದಾಖಲಾಗಲು ನಿಮಗೆ ವಿವಾಹ ಪ್ರಮಾಣ ಪತ್ರದ ಅಗತ್ಯತೆ ಇಲ್ಲ. ವಿವಾಹ ಪ್ರಮಾಣ ಪತ್ರ ಇಲ್ಲದೇ ಇದ್ದರೆ ಯಾರೊಬ್ಬರೂ ಸಾಯಲಾರರು’’ ಎಂದು ಮೆಹ್ತಾ ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ರಾಜೀವ್ ಸಹಾಯಿ ಎಂಡ್ಲಾ ಹಾಗೂ ಅಮಿತ್ ಬನ್ಸಾಲ್ ಅವರನ್ನು ಒಳಗೊಂಡ ಪೀಠ ಮನವಿಯ ಆಲಿಕೆ ನಡೆಸಿ ಜುಲೈ 6ಕ್ಕೆ ಮುಂದೂಡಿತು.
ಹಿಂದೂ ವಿವಾಹ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಹಾಗೂ ವಿದೇಶಿ ವಿವಾಹ ಕಾಯ್ದೆ ಅಡಿಯಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ಮನವಿ ಕೋರಿತ್ತು.
Next Story