ಕೋವಿಡ್ ಸೋಂಕು ಕುರಿತಾದಂತೆ ಸರಕಾರ ತಪ್ಪು ಮಾಹಿತಿ ನೀಡುತ್ತಿದೆ: ತ್ರಿಪುರ ಬಿಜೆಪಿ ಶಾಸಕ ಹೇಳಿಕೆ

2019ರ ಮಧ್ಯಾವಧಿಯವರೆಗೂ ತ್ರಿಪುರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಬಿಜೆಪಿ ಶಾಸಕ ಸುದೀಪ್ ರಾಯ್ ಬರ್ಮನ್ ತಮ್ಮದೇ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಪ್ಲಬ್ ದೇವ್ ಸರಕಾರವು ಕೋವಿಡ್ ಸಂಕಿನ ಕುರಿತಾದಂತೆ ಬಿಡುಗಡೆ ಮಾಡುತ್ತಿರುವ ಅಂಕಿ ಅಂಶಗಳು ʼಬೃಹತ್ ಮಂಜಿನ ಬೆಟ್ಟದ ತುದಿʼಯಂತಿದೆ ಎಂದು ಹೇಳಿಕೆ ನೀಡಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಬರ್ಮನ್, "ಸರಕಾರವು ಕೋವಿಡ್ ನಿರ್ವಹಿಸುತ್ತಿರುವ ಆಡಳಿತ ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳಿವೆ. ಸದ್ಯ ರಾಜ್ಯಕ್ಕೆ ಅತ್ಯುತ್ತಮವಾದ ಆರೋಗ್ಯ ಮಂತ್ರಿಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
"ಸರಕಾರ ಬಿಡುಗಡೆ ಮಾಡುತ್ತಿರುವ ಅಂಕಿ ಅಂಶ ಬೆಟ್ಟದ ತುದಿ ಅಷ್ಟೇ. ಆದರೆ ನಿಜವಾದ ಪರಿಸ್ಥಿತಿ ವಿಭಿನ್ನವಾಗಿದೆ. ಸರಿಯಾಗಿ ಪರೀಕ್ಷೆಗಳು ನಡೆಸುತ್ತಿಲ್ಲವಾದ್ದರಿಂದ ನಮಗೆ ಪಾಸಿಇವಿಟಿ ರೇಟ್ ಕುರಿತಾದಂತೆ ಸರಿಯಾಗಿ ತಿಳಿದು ಬರುತ್ತಿಲ್ಲ. ಸರಕಾರವು ಬೃಹತ್ ಪರೀಕ್ಷಾ ಅಭಿಯಾನ ಕೈಗೊಳ್ಳಬೇಕು. ಜೊತೆಗೆ ಲಸಿಕೆ ನೀಡುವಿಕೆಯನ್ನೂ ನಡೆಸಬೇಕು. ಮಾರ್ಕೆಟ್ ಗಳಲ್ಲಿ ಜನ ಸಂದಣಿ ಹೆಚ್ಚಾಗದಂತೆ ಸರಕಾರ ನೋಡಿಕೊಳ್ಳಬೇಕು. ಲೋಕಲ್ ಟ್ರೈನ್ ಗಳನ್ನು ನಿಲುಗಡೆ ಮಾಡಬೇಕು" ಎಂದು ಅವರು ಹೇಳಿದರು.