ಭಾರತದಲ್ಲಿ ಈ ತನಕ 11,717 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ, ಗುಜರಾತ್‌ನಲ್ಲಿ ಗರಿಷ್ಠ

ಹೊಸದಿಲ್ಲಿ: ಭಾರತದಲ್ಲಿ ಇದುವರೆಗೆ 11,717 ಜನರಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿದ್ದು, ಗುಜರಾತ್, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಗರಿಷ್ಟ ಪ್ರಕರಣಗಳು ದಾಖಲಾಗಿವೆ ಎಂದು ಸರಕಾರದ ಇತ್ತೀಚಿನ ಅಂಕಿಅಂಶಗಳಿಂದ ಬಯಲಾಗಿದೆ.
ಕೋವಿಡ್ ರೋಗಿಗಳಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಕಳೆದ ವಾರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು "ಕಪ್ಪು ಶಿಲೀಂಧ್ರ" ವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಲು ಮತ್ತು ಎಲ್ಲಾ ಪ್ರಕರಣಗಳನ್ನು ವರದಿ ಮಾಡಲು ಕೇಳಿಕೊಂಡಿತ್ತು. ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಈ ರೋಗವು ಹೊಸ ಸವಾಲಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದರು.
ಮಹಾರಾಷ್ಟ್ರದಲ್ಲಿ ಇದುವರೆಗೆ 2,770 ಪ್ರಕರಣಗಳು, ಗುಜರಾತ್ ನಲ್ಲಿ 2,859 ಪ್ರಕರಣಗಳು ಹಾಗೂ ಆಂಧ್ರಪ್ರದೇಶದಲ್ಲಿ 768 ಪ್ರಕರಣಗಳು ದಾಖಲಾಗಿವೆ. ಕೇಂದ್ರ ಸಚಿವ ಸದಾನಂದ ಗೌಡ ಅವರು ಟ್ವೀಟ್‌ನಲ್ಲಿ ವಿವಿಧ ರಾಜ್ಯಗಳ ಅಂಕಿ-ಅಂಶವನ್ನು ಹಂಚಿಕೊಂಡಿದ್ದಾರೆ.
ಕಣ್ಣು ಅಥವಾ ಮೂಗಿನ ಸುತ್ತ ನೋವು ಹಾಗೂ ಕೆಂಪಾಗುವುದು. ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ರಕ್ತಸಿಕ್ತ ವಾಂತಿ ಮತ್ತು ಬದಲಾದ ಮಾನಸಿಕ ಸ್ಥಿತಿ ಕಪ್ಪು ಶಿಲೀಂದ್ರದ ಕೆಲವು ಲಕ್ಷಣಗಳಾಗಿವೆ.
ಮ್ಯೂಕೊರ್ಮೈಕೋಸಿಸ್ ಚಿಕಿತ್ಸೆಯಲ್ಲಿ ಬಳಸಲಾಗುವ ಆಂಫೊಟೆರಿಸಿನ್- ಬಿ ಔಷಧದ ಹೆಚ್ಚುವರಿ 29,250 ಬಾಟಲುಗಳನ್ನು ಇಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ. ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆಯನ್ನು ಆಧರಿಸಿ ಈ ಹಂಚಿಕೆಯನ್ನು ಮಾಡಲಾಗಿದೆ. ದೇಶಾದ್ಯಂತ 11,717 ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟಿಸಿದ್ದಾರೆ.
Additional 29,250 vials of #Amphotericin- B drug, used in treatment of #Mucormycosis, have been allocated to all the States/UTs today.
— Sadananda Gowda (@DVSadanandGowda) May 26, 2021
The allocation has been made based on the number of patients under treatment which is 11,717 across the country.#blackfungus#AmphotericinB pic.twitter.com/j0LyR6GLjH