ಮಧ್ಯಪ್ರದೇಶ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಇಸ್ಲಾಮಿಕ್ ವಿದ್ವಾಂಸ ಮೌಲಾನ ಮುಫ್ತಿ ಅಬ್ದುರ್ರಝಾಕ್ ಖಾನ್ ನಿಧನ

ಭೋಪಾಲ: ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಖಿಲ ಭಾರತ ಜಮಿಯ್ಯತುಲ್ ಉಲಮಾ ಎ ಹಿಂದ್ ಉಪಾಧ್ಯಕ್ಷ ಮೌಲಾನಾ ಮುಫ್ತಿ ಅಬ್ದುರ್ರಝಾಕ್ ಖಾನ್ ರವರು ದೀರ್ಘ ಕಾಲದ ಅನಾರೋಗ್ಯದ ಬಳಿಕ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಗುರುವಾರ ವರದಿ ಮಾಡಿದೆ. ಅವರಿಗೆ 95 ವಯಸ್ಸಾಗಿತ್ತು.
ಬುಧವಾರ ರಾತ್ರಿ ಅವರು ನಿಧನರಾಗಿದ್ದು ಅವರ ಅಂತಿಮ ವಿಧಿ ವಿಧಾನಗಳನ್ನು ಬಾದಾ ಬಾಗ್ ನ ಕಬರಸ್ತಾನದಲ್ಲಿ ನಡೆಯಿತು. ಅವರ ಅಂತಿಮ ಕ್ರಿಯೆಗಳನ್ನು ನೆರವೇರಿಸುವ ಮುನ್ನ ಮಧ್ಯಪ್ರದೇಶ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವಾರು ಹಿರಿಯ ನಾಯಕರು ಅಬ್ದುರ್ರಝಾಕ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Next Story