ಹಲವು ಕೇಂದ್ರ ಸಚಿವರು ಮೂರು ಮಕ್ಕಳನ್ನು ಹೊಂದಿದ್ದಾರೆ, ಲಕ್ಷದ್ವೀಪದ ಪಂಚಾಯತ್ ಸದಸ್ಯರಿಗೆ 2 ಮಕ್ಕಳ ನಿಯಮವೇಕೆ?
ಮಹುಆ ಮೊಯಿತ್ರಾ ಪ್ರಶ್ನೆ

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಆಪ್ತ ಪ್ರಫುಲ್ ಖೋಡಾ ಪಟೇಲ್ ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕ ಅಲ್ಲಿನ ನಿಯಮಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಗೋಹತ್ಯೆ ನಿಷೇಧ, ಶರಾಬು ಅಂಗಡಿಗಳ ತೆರೆಯುವಿಕೆ ಮುಂತಾದ ಕಾರ್ಯಗಳು ನಡೆಯುತ್ತಿದ್ದು, ಇದರೊಂದಿಗೆ ಪಂಚಾಯತ್ ಚುನಾವಣೆಗೆ ಸ್ಫರ್ಧಿಸುವವರು ೨ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು ಎಂಬ ನಿಯಮವನ್ನೂ ಜಾರಿಗೊಳಿಸಲಾಗಿದೆ. ಈ ಕುರಿತಾದಂತೆ ತೃಣಮೂಲಕ ಕಾಂಗ್ರೆಸ್ ನಾಯಕಿ ಮಹುಆ ಮೊಯಿತ್ರ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಈಗಿನ ಕೇಂದ್ರ ಭದ್ರತಾ ಸಚಿವರು, ವಿದೇಶಾಂಗ ಸಚಿವರು ಹಾಗೂ ಸಾರಿಗೆ ಸಚಿವರು ಸೇರಿದಂತೆ ಹಲವರು ಪತ್ನಿ ಮತ್ತು ಮೂವರು ಮಕ್ಕಳನ್ನು ಹೊಂದಿದ್ದಾರೆ. ಹೀಗಿರುವಾಗ ಬಿಜೆಪಿಯ ಆಡಳಿತಾಧಿಕಾರಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಲಕ್ಷದ್ವೀಪದ ಪಂಚಾಯತ್ ಸದಸ್ಯರಾಗಲು ಅನರ್ಹರು ಎಂಬ ನಿಯಮವನ್ನು ಹೇಗೆ ಪರಿಚಯಿಸಿದರು?" ಎಂದು ಅವರು ಪ್ರಶ್ನಿಸಿದ್ದಾರೆ.
"ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಬಿಜೆಪಿಯ ನಾಯಕರು ಈಗಲೇ ತಮ್ಮ ಸ್ಥಾನವನ್ನು ತ್ಯಜಿಸುವುದು ಒಳಿತು. ಹೀಗಾದಲ್ಲಿ ಬಿಜೆಪಿಗರು ದೇಶದ ಮೂಲೆಮೂಲೆಗೂ ಉತ್ತಮ ಸಂದೇಶ ನೀಡಿದಂತಾಗುತ್ತದೆ. ದೇಶಕ್ಕೆ ಇದು ಸಹಕಾರಿಯಾಗಲಿದೆ" ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.
Current Union Ministers of Defence, External Affairs & Road Transport among many w/ 3 children each
— Mahua Moitra (@MahuaMoitra) May 28, 2021
So how does @BJP administrator introduce draft regulation for Lakshwadeep disqualifying panchayat members w/ more than 2 children?