ವ್ಯಕ್ತಿ ನಾಪತ್ತೆ
ಮಂಗಳೂರು, ಮೇ 29: ನಗರದಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ ಅಲ್ಬರ್ಟ್ ಡಿಸೋಜ (55) ಎಂಬವರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಮಲು ಪದಾರ್ಥ ಸೇವಿಸುತ್ತಿದ್ದರು. ಮೇ 24ರಂದು ಸಂಜೆ 6 ಗಂಟೆಗೆ ಮನೆಯಿಂದ ಕೆಂಪು ಬಣ್ಣದ ಟಿಫನ್ ಬ್ಯಾಗ್ ಹಿಡಿದುಕೊಂಡು ಹೋದವರು ವಾಪಸ್ ಬರದೆ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.
ಗೋಧಿ ಮೈಬಣ್ಣ , ಸಪೂರ ಶರೀರ ಹೊಂದಿದ್ದು 5.7 ಅಡಿ ಎತ್ತರವಿದ್ದು ಕನ್ನಡ, ಹಿಂದಿ, ತಮಿಳು, ಇಂಗ್ಲಿಷ್, ಮಲಯಾಳಂ ಭಾಷೆ ಮಾತನಾಡುತ್ತಾರೆ. ಬಲ ಭಾಗದ ಮೂಗಿನಲ್ಲಿ ಕಪ್ಪು ಮಚ್ಚೆಯಿದೆ. ನೀಲಿ, ಹಸಿರು, ಗ್ರೇ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.
ಇವರ ಬಗ್ಗೆ ಮಾಹಿತಿ ದೊರೆತವರು ಠಾಣೆ(0824-2220500)ಯನ್ನು ಸಂಪರ್ಕಿಸುವಂತೆ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
Next Story





