ಕೆಂಜಾರು : ಯುವತಿ ಕಾಣೆ
ಮಂಗಳೂರು, ಮೇ 29: ಬಜ್ಪೆ ಸಮೀಪದ ಕೆಂಜಾರಿನ ಹುಸೈನ್ ಶರೀಫ್ ಎಂಬವರ ಪುತ್ರಿ ಫಾತಿಮಾ ಸಾಹಿರಾ (21) ಎಂಬಾಕೆ ಮೇ 26ರ ತಡರಾತ್ರಿ ನಾಪತ್ತೆಯಾದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದು ರಾತ್ರಿ ಊಟ ಮುಗಿಸಿದ ಬಳಿಕ ಹುಸೈನ್ ಶರೀಫ್ ಮತ್ತವರ ಪತ್ನಿ ಹಾಗೂ ಇಬ್ಬರು ಪುತ್ರಿಯರಾದ ಫಾತಿಮಾ ಸಾಹಿರಾ ಮತ್ತು ಮಿಶ್ರಿಯಾ ಎಂಬವರು ನಿದ್ದೆ ಮಾಡಿದ್ದರು. ರಾತ್ರಿ ಸುಮಾರು 12:20ರ ವೇಳೆಗೆ ಕಿರಿಯ ಪುತ್ರಿ ಮಿಶ್ರಿಯಾ ತನ್ನ ತಂದೆ ಹುಸೈನ್ ಶರೀಫ್ ಬಳಿ ಅಕ್ಕ ಫಾತಿಮಾ ಸಾಹಿರಾ ಕಾಣೆಯಾದ ಬಗ್ಗೆ ತಿಳಿಸಿದ್ದಾರೆ. ಅದರಂತೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಿಗದ ಕಾರಣ ಠಾಣೆಗೆ ದೂರು ನೀಡಿ ಪತ್ತೆ ಹಚ್ಚಿ ಕೊಡುವಂತೆ ಹುಸೈನ್ ಶರೀಫ್ ಮನವಿ ಮಾಡಿದ್ದಾರೆ.
Next Story





