ಉತ್ತರಪ್ರದೇಶ: ಬ್ಲಾಕ್, ವೈಟ್, ಯಲ್ಲೋ ಫಂಗಸ್ ಸೋಂಕಿತ ಸಾವು
ಗಾಝಿಯಾಬಾದ್, ಮೇ 29: ಬ್ಲಾಕ್, ವೈಟ್ ಹಾಗೂ ಯೆಲ್ಲೋ ಫಂಗಸ್ ಪತ್ತೆಯಾದ 59 ವರ್ಷದ ಕೊರೋನ ಸೋಂಕಿತರೋರ್ವರು ಮೃತಪಟ್ಟಿದ್ದಾರೆ. ಕುನ್ವಾರ್ ಸಿಂಗ್ ಅವರು ಕೊರೋನ ಸೋಂಕು ಹಾಗೂ ಫಂಗಸ್ಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ರಕ್ತ ನಂಜಾಗಿ ಅವರು ಶುಕ್ರವಾರ ರಾತ್ರಿ 7.30ಕ್ಕೆ ಸಾವನ್ನಪ್ಪಿದ್ದಾರೆ ಎಂದು ರಾಜ್ನಗರ ಪ್ರದೇಶದ ಹರ್ಷ ಆಸ್ಪತ್ರೆಯ ಇಎನ್ಟಿ ತಜ್ಞ ಡಾ. ಬಿ.ಪಿ. ತ್ಯಾಗಿ ತಿಳಿಸಿದ್ದಾರೆ.
ಸಂಜಯ್ ನಗರದ ವಕೀಲರಾಗಿದ್ದ ಕುನ್ವಾರ್ ಸಿಂಗ್ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೇ 24ರಂದು ಎಂಡೋಸ್ಕೋಪಿಯಲ್ಲಿ ಅವರಿಗೆ ವೈಟ್, ಬ್ಲಾಕ್ ಹಾಗೂ ಯೆಲ್ಲೋ ಫಂಗಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು ಎಂದು ತ್ಯಾಗಿ ತಿಳಿಸಿದ್ದಾರೆ.
Next Story