ಬೆಳ್ತಂಗಡಿ: ಸಿಯೋನ್ ಆಶ್ರಮದಲ್ಲಿ 194 ಕೊರೋನ ಪಾಸಿಟಿವ್ ಪ್ರಕರಣ
ಆಶ್ರಮವಾಸಿಗಳ ಸ್ಥಳಾಂತರ

ಬೆಳ್ತಂಗಡಿ: ಅನಾಥರು, ಮಾನಸಿಕ ಅಸ್ವಸ್ಥರು ಹಾಗೂ ನಿರ್ಗತಿಕರನ್ನು ಸಲಹುವ ಬೆಳ್ತಂಗಡಿ ತಾಲೂಕಿನ ಗಂಡುಬಾಗಿಲು ಸಿಯೋನ್ ಆಶ್ರಮದಲ್ಲಿ 194 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಶಾಸಕ ಹರೀಶ್ ಪೂಂಜ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ರವಿವಾರ ಆಶ್ರಮಕ್ಕೆ ಭೇಟಿ ಮಾಡಿ ಆಶ್ರಮದಲ್ಲಿದ್ದವರನ್ನು ಧರ್ಮಸ್ಥಳದ ರಜತಾದ್ರಿ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಆಶ್ರಮದಲ್ಲಿ ಒಟ್ಟು 270 ಮಂದಿಯಿದ್ದು, ಅವುಗಳ ಪೈಕಿ ಎಲ್ಲರ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಮೇ 30 ಕ್ಕೆ 194 ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೆ ಓರ್ವ ಆಶ್ರಮವಾಸಿ ಪಾಸಿಟಿವ್ ಬಂದು ಮೃತಪಟ್ಟಿದ್ದರಿಂದ ಆರೋಗ್ಯ ಇಲಾಖೆಗೆಯು ಆಶ್ರಮದಿಂದ ಸ್ಥಳಾಂತರಿಸಲು ನಿರ್ಧರಿಸಲಾಯಿತು. ರಜತಾದ್ರಿಯಲ್ಲಿ 600 ಬೆಡ್ ಅವಕಾಶವಿದ್ದು, 300 ಕೊಠಡಿಗಳಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕ್ವಾರೆಂಟೈನ್ ಕೇಂದ್ರಕ್ಕಾಗಿ ಬಿಟ್ಟುಕೊಟ್ಟಿದ್ದಾರೆ.
Next Story









