ಉತ್ತರಪ್ರದೇಶ: 600ಕ್ಕಿಂತ ಕಡಿಮೆ ಸಕ್ರಿಯ ಕೋವಿಡ್ ಪ್ರಕರಣವಿರುವ ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ

ಲಕ್ನೊ: ಪ್ರಸ್ತುತ 600 ಕ್ಕಿಂತ ಕಡಿಮೆ ಸಕ್ರಿಯ ಕೋವಿಡ್ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿನ ನಿರ್ಬಂಧಗಳನ್ನು ಜೂನ್ 1 ರಿಂದ ಸಡಿಲಿಸಲು ಉತ್ತರ ಪ್ರದೇಶ ಸರಕಾರ ರವಿವಾರ ನಿರ್ಧರಿಸಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಇಪ್ಪತ್ತು ಜಿಲ್ಲೆಗಳಲ್ಲಿ ಸದ್ಯಕ್ಕೆ ಯಾವುದೇ ಸಡಿಲಿಕೆ ಇರುವುದಿಲ್ಲ. ಪ್ರಮುಖ ನಗರಗಳಾದ ಲಕ್ನೋ, ನೋಯ್ಡಾ ಹಾಗೂ ಗಾಝಿಯಾಬಾದ್ ಈ ಜಿಲ್ಲೆಗಳಲ್ಲಿ ಬರುತ್ತವೆ.
ಸರಕಾರದ ಅಧಿಸೂಚನೆಯ ಪ್ರಕಾರ 600 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳ ಮಾರುಕಟ್ಟೆಗಳು ಈಗ ವಾರದ ದಿನಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆಯಬಹುದು.
ಆದಾಗ್ಯೂ, ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಾರುಕಟ್ಟೆ ಪ್ರದೇಶಗಳನ್ನು ಸ್ಚಚ್ಛ ಗೊಳಿಸಲು ಈ ಮುಚ್ಚುವಿಕೆಯನ್ನು ಬಳಸಲಾಗುತ್ತದೆ.
Next Story





