ಆಡಳಿತದಲ್ಲಿ ವೈಫಲ್ಯ ಕಂಡ ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ವೆಲ್ಫೇರ್ ಪಾರ್ಟಿ ಆಗ್ರಹ
ಬೆಂಗಳೂರು, ಮೇ 30: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸತತ ಏಳು ವರ್ಷಗಳಿಂದ ಆಡಳಿತ ವೈಫಲ್ಯ ಕಂಡಿದ್ದು, ಈ ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ರವಿವಾರ ಇಲ್ಲಿನ ಜಯನಗರದ ಬೆಂಗಳೂರು ದಕ್ಷಿಣ ಪಕ್ಷದ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯರು, ಕೇಂದ್ರ ಸರಕಾರವೂ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಸೋತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಇಂದಿಗೆ ಕೇಂದ್ರ ಸರಕಾರದ ಎರಡನೇ ಅವಧಿಯ ಎರಡು ವಷಗಳು ತುಂಬಿವೆ.ಆದರೆ ಈ ದಿನಗಳು ಜನಸಾಮಾನ್ಯರ ಮಟ್ಟಿಗೆ ಬಹಳ ವಿನಾಶಕಾರಿಯಾಗಿವೆ ಎಂದು ದೂರಿದರು.
ಕೋವಿಡ್-9 ಬೇಜವಾಬ್ದಾರಿಯುತವಾಗಿ ಮತ್ತು ತಪ್ಪಾಗಿ. ನಿರ್ವಹಣೆ ಮಾಡುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಈ ಕೂಡಲೇ ರಾಜೀನಾಮೆ ನೀಡಬೇಕು. ಈ ಕೊರೋನ ಸೋಂಕಿನಿಂದ ಪ್ರಾಣ ಕಳೆದುಕೊಂಡಿರುವ ಪ್ರತಿವೊಬ್ಬರಿಗೂ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.





