ಆಶಾ ಕಾರ್ಯಕರ್ತರಿಗೆ ಮಾಸ್ಕ್, ಮಾತ್ರೆ ವಿತರಣೆ

ಉಡುಪಿ, ಮೇ 30: ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಲೆವೂರು ಇದರ ವತಿಯಿಂದ 200 ಮಾಸ್ಕ್ ಹಾಗೂ 600 ವಿಟಮಿನ್ ಸಿ ಮಾತ್ರೆಗಳನ್ನು ಇಂದು ಅಲೆವೂರಿನ ಆಶಾ ಕಾರ್ಯಕರ್ತರಿಗೆ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಂತೋಷ್ ಪೂಜಾರಿ, ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪಅಂಚನ್, ಉಪಾಧ್ಯಕ್ಷ ಸುಧಾಕರ್ ಪೂಜಾರಿ, ಸಮಿತಿಯ ಕಾರ್ಯದರ್ಶಿ ಉಲ್ಲಾಸ್ ಪೂಜಾರಿ ಹಾಗೂ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಜಲೇಶ್ ಶೆಟ್ಟಿ, ಸುನಿಲ್ ಸೇರಿಗಾರ್ ಉಪಸ್ಥಿತರಿದ್ದರು.
Next Story





