ಉಡುಪಿ ಜಿಲ್ಲೆಯ ಒಬ್ಬರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆ: ಡಿಎಚ್ಒ
ಉಡುಪಿ, ಮೇ 30: ಉಡುಪಿ ಸಮೀಪದ ಕಡೆಕಾರಿನ 55 ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕಪ್ಪು ಶಿಲೀಂದ್ರದ ಸೋಂಕು ರವಿವಾರ ಪತ್ತೆಯಾಗಿದ್ದು, ಅವರು ಮಣಿಪಾಲದ ಕೆಎಂಸಿಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈ ಮೂಲಕ ಜಿಲ್ಲೆಯ ಮೂವರು -ಮತ್ತಿಬ್ಬರು ಗಂಗೊಳ್ಳಿ ಮತ್ತು ಪೆರ್ಡೂರಿನವರು- ಇದೀಗ ಕಪ್ಪು ಶಿಲೀಂದ್ರ ಸೋಂಕಿಗಾಗಿ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯ ಇಬ್ಬರು ಮಂಗಳೂರಿನ ವೆನ್‌ಲಾಕ್ ನಲ್ಲಿ ಚಿಕಿತ್ಸೆ ಮುಂದುವರಿಸಿದ್ದರೆ, ಒಬ್ಬ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಪ್ಪು ಶಿಲೀಂದ್ರ ಪ್ರಕರಣದ ಹೊರಜಿಲ್ಲೆಯ ಕೆಲವು ರೋಗಿಗಳು ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ
Next Story





