ಮೇ 31ರಂದು ಕೋವಿಡ್ ಲಸಿಕೆ ಲಭ್ಯ
ಮಂಗಳೂರು, ಮೇ 30: ನಗರದ ಎಲ್ಲಾ 10 ಆರೋಗ್ಯ ಕೇಂದ್ರಗಳಲ್ಲಿ 45 ವರ್ಷ ಪ್ರಾಯ ಮೀರಿದವರಿಗೆ ಮೇ 31ರಂದು ಕೋವಿಶೀಲ್ಡ್ ಪ್ರಥಮ ಡೋಸ್ ಲಸಿಕೆ ನೀಡಲಾಗುವುದು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮೇ 31ರಂದು ಲಸಿಕಾ ಶಿಬಿರವಿರುವುದಿಲ್ಲ. ಅಲ್ಲದೆ ಮಂಗಳೂರು ತಾಲೂಕು ಹೊರತುಪಡಿಸಿ ಉಳಿದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಲಸಿಕೆಯ ಪ್ರಥಮ ಡೋಸ್ ನೀಡಲಾಗುವುದು ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ..
Next Story





