ಕೋಳಿ ಅಂಕ: ನಾಲ್ವರ ಬಂಧನ
ಮಲ್ಪೆ, ಮೇ 30: ಕಡೇಕಾರು ಗ್ರಾಮದ ಸೋಮಯ್ಯ ರಸ್ತೆಯಲ್ಲಿರುವ ತೋಟದ ಬದಿಯಲ್ಲಿ ಮೇ 29ರಂದು ಕೋಳಿ ಅಂಕ ನಡೆಸುತ್ತಿದ್ದ ನಾಲ್ವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಭರತ್, ರಾಜೇಶ, ರವಿಕುಮಾರ, ಸುದರ್ಶನ ಬಂಧಿತ ಆರೋಪಿಗಳು. ಇವರಿಂದ 2000 ರೂ. ನಗದು, 4 ಕೋಳಿಗಳನ್ನು ಹಾಗೂ ಎರಡು ಕೋಳಿ ಬಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





