ಬ್ಲ್ಯಾಕ್ ಫಂಗಸ್‍ಗೆ ನಿವೃತ್ತ ಎಸ್ಪಿ ಹೆಚ್ಚುವರಿ ಬಲಿ
ಕಲಬುರ್ಗಿ, ಮೇ 30: ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ಸೋಂಕಿನಿಂದ ಪೊಲೀಸ್ ಇಲಾಖೆಯ ನಿವೃತ್ತ ಹೆಚ್ಚುವರಿ ಎಸ್ಪಿವೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಮೂಲದರಾದ ಬಿ.ಮಹಾಂತೇಶ್ ಎಂಬುವರು ಮೃತಪಟ್ಟಿರುವ ನಿವೃತ್ತ ಹೆಚ್ಚುವರಿ ಎಸ್ಪಿ ಎಂದ ತಿಳಿದು ಬಂದಿದೆ.
65 ವರ್ಷದ ಬಿ.ಮಹಾಂತೇಶ್ ಅವರಿಗೆ ಇತ್ತೀಚೆಗಷ್ಟೇ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು. ಬಳಿಕ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಾಣಿಸಿಕೊಂಡಿದ್ದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಿ.ಮಹಾಂತೇಶ್ ಅವರು ಪೊಲೀಸ್ ಮತ್ತು ಲೋಕಾಯುಕ್ತ ಇಲಾಖೆಯಲ್ಲಿ ಹಲವು ವರ್ಷಗಳು ಸೇವೆ ಸಲ್ಲಿಸಿದ್ದಾರೆ.
Next Story





