ಮಂಗಳೂರು: ಕಾರ್ಗೋ ವಿಮಾನದ ಮೂಲಕ ಆಕ್ಸಿಜನ್ ಕಂಟೇನರ್ ಏರ್ ಲಿಫ್ಟ್

ಮಂಗಳೂರು : ಕುವೈತ್ ನಿಂದ ಎನ್‌ಎಂಪಿಟಿಗೆ ಬಂದಿದ್ದ ಮೆಡಿಕಲ್ ಆಕ್ಸಿಜನ್‌ನ ಖಾಲಿಯಾದ ಟ್ಯಾಂಕರ್ ಗಳನ್ನು ಭಾರತೀಯ ವಾಯುಪಡೆಯ ಕಾರ್ಗೊ ವಿಮಾನದ ಮೂಲಕ ರವಿವಾರ ಕಳುಹಿಸಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಐಎನ್‌ಎಸ್ ಶಾರ್ದೂಲ್ ನೌಕಾಪಡೆಯ ನೌಕೆ ಮೂಲಕ ಕುವೈತ್ ನಿಂದ 7 ಕಂಟೈನರುಗಳಲ್ಲಿ ಆಕ್ಸಿಜನ್ ಮಂಗಳೂರಿಗೆ ಬಂದಿತ್ತು. ಅದರಿಂದ ಆಕ್ಸಿಜನ್ ಖಾಲಿ ಮಾಡಿದ್ದು ಕಂಟೈನರುಗಳಲ್ಲಿ 4ನ್ನು ರವಿವಾರ ಮಂಗಳೂರಿಗೆ ಬಂದಿದ್ದ ವಾಯುಪಡೆ ವಿಮಾನ ಮೂಲಕ ಮುಂಬೈಗೆ ಕಳುಹಿಸಲಾಗಿದೆ.
ಮೇ13ರಂದೂ ಇದೇ ರೀತಿ ಖಾಲಿ ಕಂಟೈನರ್‌ಗಳನ್ನು ಚಂಡೀಗಢಕ್ಕೆ ಕಳುಹಿಸಲಾಗಿತ್ತು. ಈ ವರೆಗೆ ಐದು ಹಡಗುಗಳಲ್ಲಿ ಮಂಗಳೂರಿಗೆ ಕುವೈತ್ ನಿಂದ ಆಕ್ಸಿಜನ್ ಬಂದಿದೆ. ಮಂಗಳೂರಿನಲ್ಲಿ ಆಕ್ಸಿಜನ್ ಕಂಟೈನರ್‌ಗಳನ್ನು ಗಣೇಶ್ ಶಿಪ್ಪಿಂಗ್‌ನವರು ಉಚಿತವಾಗಿ ಸಾಗಾಟ ಮಾಡುತ್ತಿದ್ದು, ಅದರಂತೆ ಟ್ರೈಲರ್ ಗಾಡಿಯ ಮೂಲಕ ಖಾಲಿ ಕಂಟೈನರುಗಳನ್ನು ವಾಯುಪಡೆಯ ಸರಕು ಸಾಗಾಟ ವಿಮಾನಕ್ಕೆ ಲೋಡ್ ಮಾಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





