ಶಿವಮೊಗ್ಗ : ಕೊರೋನ ಐಸೋಲೇಷನ್ ವಾರ್ಡ್‌ನಲ್ಲಿ ಹಾಡು, ಡ್ಯಾನ್ಸ್
ಸೋಂಕಿತರಿಗೆ ಉತ್ಸಾಹ ತುಂಬಿದ ಆಸ್ಪತ್ರೆ ಸಿಬ್ಬಂದಿ

ಶಿವಮೊಗ್ಗ : ಚಿಕಿತ್ಸೆ ಪಡೆಯುತ್ತಿರುವ ಕೊರೋನ ಸೋಂಕಿತರಲ್ಲಿ ಉತ್ಸಾಹ, ಚೈತನ್ಯ ತುಂಬಲು ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಸಿಬ್ಬಂದಿ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಸೋಂಕಿತರೊಂದಿಗೆ ಹಾಡು ಹೇಳಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿರುವ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಐಸೋಲೆಷನ್ ವಾರ್ಡ್‌ನಲ್ಲಿ ಕುಟುಂಬದವರಿಗೆ ಸೋಂಕಿತರನ್ನು ಭೇಟಿಯಾಗುವಂತಿಲ್ಲ. ಇದರಿಂದ ಸೋಂಕಿತರಲ್ಲಿ ಒಂಟಿತನ ಕಾಡುತ್ತದೆ. ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಲು ಆಸ್ಪತ್ರೆ ಸಿಬ್ಬಂದಿ ವಿಶೇಷ ಪ್ರಯೋಗ ಮಾಡಿದ್ದಾರೆ.
ಪಿಪಿಇ ಕಿಟ್ ಧರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸಿಬ್ಬಂದಿ, ಚಿಕಿತ್ಸೆ ನಡುವೆ ವಾರ್ಡ್‌ನಲ್ಲಿ ಹಾಡು ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೇ ಕಿರು ನಾಟಕವನ್ನು ಮಾಡಿಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. ಐಸೋಲೇಷನ್ ವಾರ್ಡ್‌ನಲ್ಲಿ ಮನೆ ವಾತಾವರಣವಿರಲಿ ಎಂಬ ಕಾರಣಕ್ಕೆ ಈ ಪ್ರಯತ್ನ ಮಾಡಲಾಗಿದೆ ಎಂದು ಆಸ್ಪತ್ರೆ ಮಂಡಳಿಯ ನಂಜಪ್ಪ ತಿಳಿಸಿದೆ.





