ಕಾಪು ಹೋಬಳಿ ಫ್ಲೈಯಿಂಗ್ ಸ್ಕ್ವಾಡ್ ಬದಲಾವಣೆ
ಉಡುಪಿ, ಮೇ 31: ಸರಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸುವ ಸಲುವಾಗಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನು ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ನೇಮಿಸಲಾಗಿದೆ.
ಕಾಪು ಹೋಬಳಿಯ ಬಡಾ, ಬೆಳಪು, ಎಲ್ಲೂರು, ಸಾಂತೂರು, ಪಿಲಾರು, ತೆಂಕ, ನಡ್ಸಾಲು, ಫಲಿಮಾರು, ನಂದಿಕೂರು, ಪಾದೆಬೆಟ್ಟು ಹಾಗೂ ಹೆಜಮಾಡಿ ವ್ಯಾಪ್ತಿಗೆ ಪ್ರಾದೇಶಿಕ ನಿರ್ದೇಶಕರ ಕಚೇರಿಯ (ಸಿಆರ್‌ಝಡ್) ಸಹಾಯಕ ನಿರ್ದೇಶಕ ಮಂಜುನಾಥ (ಮೊ.ನಂ: 9448914718) ಇವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
Next Story





