ಸರಕಾರದಿಂದ ಕ್ಷೌರಿಕರ ನಿರ್ಲಕ್ಷ: ಸವಿತಾ ಸಮಾಜ ಆರೋಪ
ಉಡುಪಿ, ಮೇ 31: ರಾಜ್ಯದಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳನ್ನು ಗುರುತಿಸಿ ಲಸಿಕೆ ನೀಡಬೇಕೆಂದು ಆರೋಗ್ಯ ಇಲಾಖೆ ಹೊರಡಿಸಿದ ಆದೇಶದಲ್ಲಿ ಅತೀ ಸಾಮೀಪ್ಯದಲ್ಲಿ ಸ್ಪರ್ಶಿಸಿ ಸೇವೆ ನೀಡುವ ಕ್ಷೌರಿಕರನ್ನು ನಿರ್ಲಕ್ಷಿಸಿರುವುದನ್ನು ಉಡುಪಿ ಜಿಲ್ಲಾ ಸವಿತಾ ಸಮಾಜ ಟೀಕಿಸಿದೆ.
ಪರಿಹಾರ ಪ್ಯಾಕೇಜ್‌ನಲ್ಲೂ ಕಾಟಚಾರದ ಪ್ಯಾಕೇಜ್ ಘೋಷಿಸಿರುವ ಸರಕಾರ ಕೋವಿಡ್ ಲಸಿಕೆಯಲ್ಲೂ ಸ್ವಾಸ್ಥ ಸಾಮಾಜಿಕ ವ್ಯವಸ್ಥೆಯಲ್ಲಿ ಮುಂಚೂಣಿ ಸೇವೆ ನೀಡುವ ಕ್ಷೌರಿಕರನ್ನು ನಿರ್ಲಕ್ಷಿಸಿರುವುದು ಸರಕಾರದ ಬೇಜ ವಾಬ್ದಾರಿತನ ಎತ್ತಿ ತೋರಿಸುತ್ತದೆ ಎಂದು ಸವಿತಾ ಸಮಾಜದ ಅಧ್ಯಕ್ಷ ನಿಂಜೂರು ವಿಶ್ವನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಪ್ರಕಟಣೆಯಲ್ಲಿ ದೂರಿದ್ದಾರೆ.
Next Story





