ಶಿರೂರಿನಲ್ಲಿ ಕುಂಬಳಕಾಯಿ ಬೆಳೆ ಸಂಪೂರ್ಣ ಹಾನಿ
ಉಡುಪಿ, ಮೇ 31: ಭಾರೀ ಗಾಳಿ-ಮಳೆಗೆ ಬೈಂದೂರು ತಾಲೂಕು ಶಿರೂರು ಗ್ರಾಮದ ಗಣಪತಿ ಮೇಸ್ತ ಎಂಬವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದ ಕುಂಬಳಕಾಯಿ ಬೆಳೆ ಹಾಗೂ ಅರ್ಧ ಎಕರೆ ಜಾಗದಲ್ಲಿ ಬೆಳೆಸಿದ ತೊಂಡೆಕಾಯಿ ಬೆಳೆ ಸಂಪೂರ್ಣ ಹಾನಿ ಗೊಂಡಿದ್ದು, ಇದರಿಂದ ಲಕ್ಷಾಂತರ ರೂ.ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದ ವರದಿ ತಿಳಿಸಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕುಂದಾಪುರದಲ್ಲಿ 15ಮಿ.ಮೀ., ಬೈಂದೂರಿನಲ್ಲಿ 14ಮಿ.ಮೀ., ಹೆಬ್ರಿಯಲ್ಲಿ 11ಮಿ.ಮೀ., ಕಾಪು 12ಮಿ.ಮೀ., ಬಹ್ಮಾವರ 8, ಉಡುಪಿ 5 ಹಾಗೂ ಕಾರ್ಕಳದಲ್ಲಿ 4ಮಿ.ಮೀ. ಮಳೆಯಾಗಿದೆ.
Next Story





