ಹೂಹಾಕುವ ಕಲ್ಲು: ಪಡಿತರ ಕಿಟ್ ವಿತರಣೆ

ಕೊಣಾಜೆ, ಮೇ 31: ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲು ಮೈತ್ರಿ ಯೂತ್ ಕೌನ್ಸಿಲ್ ವತಿಯಿಂದ ಅರ್ಹ ಕುಟುಂಬಗಳಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರಮವು ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ತಾಪಂ ಸದಸ್ಯ ಹೈದರ್ ಕೈರಂಗಳ ಸಂಕಷ್ಟದಲ್ಲಿ ಇರುವವರಿಗೆ ನಿರಂತರ ಸಹಾಯಹಸ್ತ ಚಾಚುತ್ತಾ ಸಂಘಟನೆಯು ಗ್ರಾಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.
ಬಾಳೆಪುಣಿ ಗ್ರಾಪಂ ಸದಸ್ಯರಾದ ಅಬ್ದುಲ್ ರಹ್ಮಾನ್ ತೋಟಾಲ್, ಹನೀಫ್ ಹೂಹಾಕುವ ಕಲ್ಲು, ಎಂವೈಸಿ ಅಧ್ಯಕ್ಷ ಅಶ್ರಫ್ ಚೋಟಾ, ಗೌರವಾಧ್ಯಕ್ಷ ಹನೀಫ್ ಹಾಜಿ, ಮಾಜಿ ಅಧ್ಯಕ್ಷ ಹಮೀದ್ ಕಿಲಾರಿ, ಉಪಾಧ್ಯಕ್ಷ ಹನೀಫ್ ತೋಟಾಲ್, ಸಿದ್ದೀಕ್ ಕಂಚಿಲ, ಕಾರ್ಯದರ್ಶಿಗಳಾದ ಇಸ್ಮಾಯಿಲ್ ತೋಟಾಲ್, ಇಮ್ರಾನ್ ಬೆಳ್ಳೇರಿ, ಸಫ್ವಾನ್ ನಂದಾರ್, ಕೋಶಾಧಿಕಾರಿ ಆರಿಫ್ ಬೆಳ್ಳೇರಿ, ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಕಾಯಾರ್, ಹಮೀದ್ ತೋಟಾಲ್, ಅಬ್ದುಲ್ ಆಸಿಫ್ ಕಾಯಾರ್ ಉಪಸ್ಥಿತರಿದ್ದರು.
ರಫೀಕ್ ಮುಸ್ಲಿಯಾರ್ ದುಆಗೈದರು. ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಕಾಯಾರ್ ಸ್ವಾಗತಿಸಿದರು.
Next Story





