ಆಟ ಆಡುತ್ತಿದ್ದ ಮೈದಾನಕ್ಕೆಪೊಲೀಸರ ತಂಡ ದಾಳಿ: ಬೈಕ್ ಗಳ ವಶ
ಉಳ್ಳಾಲ, ಇಲ್ಲಿನ ಠಾಣೆ ವ್ಯಾಪ್ತಿಯ ತಲಪಾಡಿ ಗ್ರಾಮದ ಪಂಜಳ ಆಟ ಆಡುತ್ತಿದ್ದ ಮೈದಾನಕ್ಕೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಆಟದಲ್ಲಿ ನಿರತರಾಗಿದ್ದ ಯುವಕರು ಪರಾರಿಯಾದರು ಎನ್ನಲಾದ ಘಟನೆ ಸೋಮವಾರ ನಡೆದಿದೆ.
ಪಂಜಳದಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘಿಸಿ ಏಳೆಂಟು ಮಂದಿ ಹೌಝಿ ಹೌಝಿ ಪಂದ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಈ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸೋಮವಾರ ಸಂಜೆ ದಾಳಿ ನಡೆಸಿದ್ದಾರೆ. ಪಂದ್ಯದಲ್ಲಿ ನಿರತರಾಗಿದ್ದ ಯುವಕರು ಪರಾರಿಯಾಗಿದ್ದು, ಅವರು ಬಳಕೆ ಮಾಡಿದ ಮೂರು ಬೈಕ್ ಗಳನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





