ಭಟ್ಕಳದಲ್ಲಿ ಲಾಕ್ಡೌನ್ ಸಡಿಲಿಕೆ; ಅಗತ್ಯ ವಸ್ತು ಖರೀದಿಗಾಗಿ ಮುಗಿಬಿದ್ದ ಜನ

ಭಟ್ಕಳ: ಕಳೆದ ಹಲವು ದಿನಗಳಿಂದ ಲಾಕ್ಡೌನ್ ನಲ್ಲಿದ್ದ ಭಟ್ಕಳದ ಜನತೆಗೆ ಸೋಮವಾರದಿಂದ ಗುರುವಾರದ ವರೆಗೆ ನಾಲ್ಕು ದಿನ ಬೆಳಗ್ಗೆ 8 ಗಂಟೆ ಯಿಂದ 12 ಗಂಟೆ ವರೆಗೆ ಸಡಿಲಿಕೆ ನೀಡಿದ್ದು ಇದರಿಂದಾಗಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ಪರಿಣಾಮ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಹಾಸ ಪಡಬೇಕಾಯಿತು.
ಹಳೆ ಬಸ್ ನಿಲ್ದಾಣ ಬಳಿ ಏಕ ಮುಖ ಸಂಚಾರ ಮಾಡಿದ್ದರಿಂದಾಗಿ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂಬ ಆರೋಪ ಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದು ಪೊಲೀಸರು ಏಕ ಮುಖ ಸಂಚಾರವನ್ನು ತೆರುವುಗೊಳಿಸಿ ಮುಖ್ಯ ರಸ್ತೆ ಮತ್ತು ಸುಲ್ತಾನ್ ಸ್ಟ್ರೀಟ್ ಎರಡೂ ಕಡೆ ಸಂಚಾರದ ವ್ಯವಸ್ಥೆ ಮಾಡಿದರೆ ಜನಜಂಗುಳಿ ತಪ್ಪುತ್ತದೆ ಎಂಬ ಅಭಿಪ್ರಯಾಗಳು ಕೇಳಿ ಬಂದವು.
ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿ ಲಾಕ್ಡೌನ ಸಡಿಲಿಕೆಯ ಮೊದಲ ದಿನ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ರಸ್ತೆ ಬದಿ ವ್ಯಾಪರಸ್ಥರನ್ನು ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿದ್ದರಿಂದಾಗಿ ಹೆದ್ದಾರಿಯಲ್ಲಿ ಜನರ ಓಡಾಟವು ಕಡಿಮೆಯಿತ್ತು. ಸೂಪರ್ ಮಾರ್ಕೆಟ್ ಗೆ ಅನುಮತಿ ನೀಡಿರಲಿಲ್ಲ. ಆದರೆ ಅವರ ಮನವಿಯ ಮೆರೆಗೆ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂಬ ಒಪ್ಪಿಗೆಯ ಮೆರೆಗೆ ಅನುಮತಿಯನ್ನು ನೀಡಲಾಗಿದೆ. ಸೂಪರ್ ಮಾರ್ಕೇಟ್ ಮತ್ತು ಇತರ ದೊಡ್ಡ ಅಂಗಡಿ ವ್ಯಾಪರಸ್ಥರು ಅಂತವನ್ನು ಕಾಯ್ದುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಹಳೆ ಬಸ್ ನಿಲ್ದಾಣದ ಬಳಿ ಏಕ ಮುಖ ಸಂಚಾರ ಇರುವುದರಿಂದಾಗಿ ಅಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದ್ದು ನನ್ನ ಗಮನಕ್ಕೆ ಬಂದಿದೆ. ಬೆಳಿಗ್ಗೆ 8 ಗಂಟೆ 12 ಗಂಟೆಯವರಿಗೆ ನಾನು ವಿವಿಧ ಕಡೆಗಳಲ್ಲಿ ಪರಿಶೀಲನೆ ಮಾಡಿದ್ದೇನೆ. ಜನರು ಇನ್ನೂ ಸ್ವಲ್ಪ ಸಹಕಾರ ನೀಡಬೇಕು. ಎಲ್ಲರ ಸಹಕಾರದಿಂದ ನಾವು ಯಾವುದೇ ತೊಂದರೆಯಿಲ್ಲದೆ ಕೋವಿಡ್ ಸೊಂಕನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ.










