ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಬೆಂಗಳೂರಿನಲ್ಲಿ ಇದುವರೆಗೆ 11.43 ಕೋಟಿ ರೂ. ದಂಡ ವಸೂಲಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 31: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ ಆರೋಪದಡಿ ಬಿಬಿಎಂಪಿ ಮಾರ್ಷಲ್ಗಳು ಇದುವರೆಗೂ 11,43,44650 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.
ಕೊರೋನ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಲಾಕ್ಡೌನ್ ವಿಧಿಸುವುದರ ಜೊತೆಗೆ ಮಾಸ್ಕ್ ಧಾರಣೆ ಮತ್ತು ಸುರಕ್ಷಿತಾ ಅಂತರ ಕಡ್ಡಾಯಗೊಳಿಸಿದೆ. ಆದರೆ, ಇದನ್ನು ಉಲ್ಲಂಘಿಸುವ ವ್ಯಕ್ತಿಗಳಿಂದ ದಂಡ ವಸೂಲಿ ಮಾಡಲಾಗುತ್ತಿದೆ.
ಕೋವಿಡ್ ಮಾರ್ಗಸೂಚಿ ಆರಂಭದ ದಿನದಿಂದ ಇದುವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಷಲ್ಗಳು ಬರೋಬ್ಬರಿ 11,43,44,650 ರೂ.ದಂಡ ವಸೂಲಿ ಮಾಡಿದ್ದಾರೆ.
ಇನ್ನು, 2020ನೇ ಸಾಲಿನಿಂದ ಪ್ರಸ್ತುತ ವಾರ್ಷಿಕ ಸಾಲಿನ ಮೇ ಮಾಸದವರೆಗೂ ಮಾಸ್ಕ್ ಉಲ್ಲಂಘನೆ ಮಾಡಿ ದಂಡ ಪಾವತಿಸಿದವರ ಸಂಖ್ಯೆ 4,53,561ಕ್ಕೆ ಏರಿಕೆ.ಇವರಿಂದ ಒಟ್ಟು 10,81,59,247 ರೂಪಾಯಿ ವಸೂಲಿ ಮಾಡಲಾಗಿದೆ.
ಅದೇ ರೀತಿ, ಸುರಕ್ಷಿತಾ ಅಂತರ ಉಲ್ಲಂಘನೆ ಮಾಡಿದವರ ಸಂಖ್ಯೆ 27,421 ಇದ್ದು, ಇವರಿದಂಲೂ 61,85,402 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆ ಇದುವರೆಗೂ 11 ಕೋಟಿ ರೂ. ಅಧಿಕ ಮೊತ್ತದ ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಸಿವೆ.







