ಬಿಜೆಪಿ ಸದಸ್ಯನಿಗೆ ಪೊಲೀಸರು ಥಳಿಸುತ್ತಿರುವ ವೀಡಿಯೋ ಬಳಸಿ ಮುಸ್ಲಿಂ ವಿರೋಧಿ ಕಥೆ ಹೆಣೆದ ಕಿಡಿಗೇಡಿಗಳು

ಹೊಸದಿಲ್ಲಿ: ವ್ಯಕ್ತಿಯೊಬ್ಬನಿಗೆ ಪೊಲೀಸನೊಬ್ಬ ಲಾಠಿಯೇಟು ನೀಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.


ಈ ವ್ಯಕ್ತಿ ಒಬ್ಬ ಅಂಬ್ಯುಲೆನ್ಸ್ ಚಾಲಕನೆಂದೂ ಆತ ಮೃತ ದೇಹಗಳನ್ನು ಚಿತಾಗಾರಗಳಿಗೆ ಅಂಬ್ಯುಲೆನ್ಸ್‍ನಲ್ಲಿ ಸಾಗಿಸುವ ವೃತ್ತಿ ನಡೆಸುವವನಾಗಿದ್ದು ಹೆಚ್ಚು ಆದಾಯ ಗಳಿಸಬೇಕೆಂಬ ಉದ್ದೇಶದಿಂದ ತೆಲಂಗಾಣದ ನಿಜಾಮಾಬಾದ್ ಆಸ್ಪತ್ರೆಯಲ್ಲಿ ರೋಗಿಗಳ ಆಕ್ಸಿಜನ್ ಪೂರೈಕೆಗೆ ತಡೆಯೊಡ್ಡಿ ಅವರನ್ನು ಸಾಯಿಸಿದ್ದನೆಂಬ ವಿವರಣೆಯೂ ವೀಡಿಯೋದ ಜತೆಗಿದೆ. ಈ ವ್ಯಕ್ತಿಯ ಹೆಸರು ನಸೀಮ್ ಎಂದು ಒಬ್ಬಾತ ಹೇಳಿದ್ದರೆ ಇನ್ನೊಬ್ಬನ ಪ್ರಕಾರ ಈತನ ಹೆಸರು ಅಸೀಮ್ ಖುರೇಶಿ ಆಗಿದೆ.
ಈ ವೀಡಿಯೋದ ಅಸಲಿಯತ್ತನ್ನು ತಿಳಿಯಲು altnews ವೆಬ್ ತಾಣವು ಯತ್ನಿಸಿದೆ. ಇದೇ ವೀಡಿಯೋವನ್ನು ಮೇ 27ರಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದಿಯೋಧರ್ ಅವರು ಟ್ವೀಟ್ ಮಾಡಿದ್ದರಲ್ಲದೆ ಬಿಜೆಪಿ ಮಹಾರಾಷ್ಟ್ರ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಅವರಿಗೆ ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಯೊಬ್ಬರು ಹಲ್ಲೆ ನಡೆಸಿದ್ದಾರೆಂದು ಸುನೀಲ್ ಆರೋಪಿಸಿದ್ದರು.
ಶಿವರಾಜ್‍ನ ಕುಟುಂಬ ಸದಸ್ಯರೊಬ್ಬರು ಆಸ್ಪತ್ರೆಯಲ್ಲಿ ಎಪ್ರಿಲ್ 10ರಂದು ಮೃತಪಟ್ಟ ನಂತರ ಆಕ್ರೋಶಿತ ಕುಟುಂಬಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ ಸಂದರ್ಭ ಪೊಲೀಸರು ಬಲಪ್ರಯೋಗ ನಡೆಸಿ ಆಕ್ರೋಶಿತರನ್ನು ಹೊರಕ್ಕೆ ಕಳುಹಿಸಿದ್ದರು ಎಂದು ಕದೀಮ್ ಜಲ್ನಾ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಕುರಿತು ಮಾಜಿ ಸೀಎಂ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಗಮನ ಸೆಳೆದ ನಂತರ ಓರ್ವ ಎಸ್‍ಐ ಹಾಗೂ ನಾಲ್ಕು ಕಾನ್‍ಸ್ಟೇಬಲ್‍ಗಳನ್ನು ಅಮಾನತುಗೊಳಿಸಲಾಗಿತ್ತು. ಘಟನೆ ಎಪ್ರಿಲ್ 9ರಂದು ಜಲ್ನಾದ ದೀಪಕ್ ಆಸ್ಪತ್ರೆಯಲ್ಲಿ ನಡೆದಿತ್ತು.
*ये पंचर पुत्र, मदरसा छाप, नसीम मियां निजामाबाद हॉस्पिटल में पेशेंट की ऑक्सीजन बंद कर दिया करता था, ताकि इसकी एंबुलेंस का बिजनेस हो सके।15 से ज्यादा लोगों को इसने मौत के घाट उतारा। पुलिस ने पकड़ा और इसका सही बिजनेस कर दिया।* pic.twitter.com/afiQCHdVV5
— अरुण कुमार सिंह (@Arunk750) May 30, 2021
See how @BJP4Maharashtra’s Yuva Morcha @BJYM4MH Dist Gen Sec Shivraj (Belongs to NT-B) was mercilessly beaten By police of @OfficeofUT @PawarSpeaks @RahulGandhi In Jalna.
— Sunil Deodhar (@Sunil_Deodhar) May 27, 2021
Is this a crime to raise voice against injustice?
Where are the Human Rights activists now?@BJYM @India_NHRC pic.twitter.com/wYjaH9v3m4
Maharashtra | Jalna Police seen beating up BJP Youth Secy Shivraj Nariyalwale in viral video
— ANI (@ANI) May 27, 2021
"Following death of a patient on April 10, his family vandalized hospital premises. Police used force against them to drive them out," says Inspector Prashant Mahajan, Kadim Jalna PS pic.twitter.com/qqPrBjVP1W
कोविड हॉस्पिटलमध्ये घुसून ICU ची तोडफोड केली, पोलिसांची भाजप कार्यकर्त्याला झोडपले pic.twitter.com/TE38VaLFmK
— News18Lokmat (@News18lokmat) May 27, 2021







