ಕೋಟ ಹಾಜಿ ಮೊಹಮ್ಮದ್ ಶರೀಫ್
ಬ್ರಹ್ಮಾವರ, ಜೂ.1: ಕೋಟ ನಿವಾಸಿ ಹಾಜಿ ಜಿ.ಮೊಹಮ್ಮದ್ ಶರೀಫ್ ಯಾನೆ ಮುಕ್ತುಮ್ ಭಾಯ್(78) ಅಲ್ಪಕಾಲದ ಅಸೌಖ್ಯ ದಿಂದ ಸೋಮವಾರ ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು 7 ಬಾರಿ ಕೋಟ ಜಾಮಿಯಾ ಮಸೀದಿ ಅಧ್ಯಕ್ಷರಾಗಿ ಕಾರ್ಯನಿರ್ವ ಹಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಕೋಟ ಇಬ್ರಾಹಿಂ, ಕೋಟ ಜಾಮಿಯಾ ಮಸೀದಿ ಅಧ್ಯಕ್ಷ ಸಲೀಮ್, ಉಪಾಧ್ಯಕ್ಷರು ಮುಸ್ತಫಾ ಪಡುಕೆರೆ, ಮಾಜಿ ಕಾರ್ಯದರ್ಶಿ ಸಿರಾಜ್ ಬಾರಿಕೆರೆ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story