ರಿಕ್ಷಾ, ಕ್ಯಾಬ್ ಚಾಲಕರಿಗೆ ಕೋವಿಡ್ ಲಸಿಕೆ ಪಡೆಯಲು ದೃಢೀಕರಣ ಪತ್ರ
ಉಡುಪಿ, ಜೂ.1: ಸಾರಿಗೆ ಇಲಾಖೆಯ ವತಿಯಿಂದ 20ರಿಂದ 44 ವಯೋಮಿತಿಯ ಅಟೋರಿಕ್ಷಾ ಕ್ಯಾಬ್ ಹಾಗೂ ಮೋಟಾರು ಕ್ಯಾಬ್ ಚಾಲನಾ ಅನುಜ್ಞಾ ಪತ್ರ ಹೊಂದಿರುವ ಚಾಲಕರಿಗೆ ಕೋವಿಡ್ ಚುಚ್ಚುಮದ್ದು ಹಾಕಿಸಿ ಕೊಳ್ಳಲು ಚಾಲಕರ ಅನುಜ್ಞಾ ಪತ್ರವನ್ನು ಪರಿಶೀಲಿಸಿ ಪ್ರಪತ್ರ-3 ದೃಢೀಕರಣ ಪತ್ರವನ್ನು ನೀಡಲಾಗುತ್ತಿದೆ.
ಜೂನ್ 2,3 ಮತ್ತು 4ರಂದು ಈ ದೃಢೀಕರಣ ಪತ್ರ(ಪ್ರಪತ್ರ-3)ವನ್ನು ನೀಡಲಾಗುತ್ತದೆ. ಇದರ ಪ್ರಯೋಜನವನ್ನು ಜಿಲ್ಲೆಯ ಅಟೋರಿಕ್ಷಾ ಕ್ಯಾಬ್ ಹಾಗೂ ಮೋಟಾರು ಕ್ಯಾಬ್ ಚಾಲಕರು ಪಡೆದು ಆದ್ಯತೆಯ ಮೇರೆಗೆ ಚುಚ್ಚುಮದ್ದು ಹಾಕಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೃಢೀಕರಣ ಪತ್ರ ನೀಡುವ ಸ್ಥಳ ಮತ್ತು ಸಮಯ
ಹೆಬ್ರಿ ಐಬಿಯ ಬಳಿ ಬೆಳಗ್ಗೆ 8:00ಕ್ಕೆ ಹಾಗೂ ಕಾರ್ಕಳ ಐಬಿಯ ಬಳಿ ಬೆಳಗ್ಗೆ 9:30ಕ್ಕೆ. ಮೋಟಾರು ವಾಹನ ನಿರೀಕ್ಷಕರು ವಿಶ್ವನಾಥ ನಾಯ್ಕೆ.
ಕುಂದಾಪುರ ಐಬಿಯ ಬಳಿ ಬೆಳಗ್ಗೆ 8:00ಕ್ಕೆ ಹಾಗೂ ಬೈಂದೂರು ಐಬಿಯ ಬಳಿ ಬೆಳಗ್ಗೆ 9:30ಕ್ಕೆ. ಮೋಟಾರು ವಾಹನ ನಿರೀಕ್ಷರು ಮಾರುತಿ ನಾಯ್ಕೆ.
ಬ್ರಹ್ಮಾವರ ತಾಲೂಕು ಕಚೇರಿ ಬಳಿ ಬೆಳಗ್ಗೆ 8:00ಕ್ಕೆ. ಕಾಪು ತಾಲೂಕು ಕಚೇರಿಯ ಬಳಿ ಬೆಳಗ್ಗೆ 9:30ಕ್ಕೆ ಮೋಟಾರು ವಾಹನ ನಿರೀಕ್ಷಕರು ಉದಯ ಕುಮಾರ್ ಕಾಮತ್.







