ಕಾಂಗ್ರೆಸ್ ಅಪಪ್ರಚಾರವನ್ನು ಜನರು ನಂಬವುದಿಲ್ಲ: ಕುಯಿಲಾಡಿ
ಉಡುಪಿ, ಜೂ.1: ಕೋವಿಡ್ ಒಂದು ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಹಾಗೂ ಲಸಿಕೆ ವಿತರಣೆಯಲ್ಲಿ ಬಿಜೆಪಿ ಕಾರ್ಯ ಕರ್ತರು ಜಿಲ್ಲೆಯಲ್ಲಿ ಮಾಡಿರುವ ಕೆಲಸಗಳು ಮಾತ್ರ ಮುಖ್ಯವೇ ಹೊರತು, ಕಾಂಗ್ರೆಸ್ ನಡೆಸುವ ಅಪಪ್ರಚಾರವನ್ನು ಜಿಲ್ಲೆಯ ಜನತೆ ನಂಬುವುದಿಲ್ಲ ಎಂದು ಬಿಜೆಪಿ ಜಿಲ್ಲಾದ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ವೈದ್ಯಕೀಯ ಪರಿಕರ ಹಂಚಿಕೆ, ದಿನಸಿ ಕಿಟ್ ಹಂಚಿಕೆ, ಕೋವಿಡ್ ಪೀಡಿತರ ಮನೆಗೆ ಹೋಗಿ ನೀಡಿರುವ ಸಾಂತ್ವಾನ, ಅವರಿಗೆ ನೀಡಿರುವ ಔಷದಿ ಕಿಟ್, ಪಲ್ಸ್ ಮೀಟರ್, ಮಾಸ್ಕ್ ಮತ್ತು ಲಸಿಕಾ ಕೇಂದ್ರದಲ್ಲಿ ಸ್ವಯಂ ಸೇವಕ ರಂತೆ ಕೆಲಸ ಮಾಡುವ ಪಕ್ಷದ ಕಾರ್ಯಕರ್ತರ ಕೆಲಸಗಳ ಬಗ್ಗೆ ಸಾರ್ವಜನಿಕರು ಮಾತನಾಡುತ್ತಾರೆ ವಿನಹ, ಏನೂ ಕೆಲಸ ಮಾಡದೆ ಬೀದಿಯಲ್ಲಿ ನಿಂತು ಮಾತನಾಡುವುದು ಮಾತ್ರ ಕಾಂಗ್ರೆಸ್‌ನ ಸಾಧನೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





