ಬಲೂಚಿಸ್ತಾನ: ಉಗ್ರರ ದಾಳಿಗೆ 8 ಪಾಕ್ ಯೋಧರು ಮೃತ್ಯು

ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್,ಜೂ.1: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತದಲ್ಲಿ ಸೋಮವಾರ ಶಂಕಿತ ಉಗ್ರರು ನಡೆಸಿದ ಎರಡು ದಾಳಿಗಳಲ್ಲಿ ಕನಿಷ್ಠ ಎಂಟು ಮಂದಿ ಪಾಕ್ ಅರೆಸೈನಿಕ ಯೋಧರು ಸಾವನ್ನಪ್ಪಿದ್ದಾರೆ.
ಪೀರ್ ಇಸ್ಮಾಯಿಲ್ ಝಿಯಾರತ್ ಪ್ರದೇಶದ ಸಮೀಪದಲ್ಲಿ ಭದ್ರತಾ ಠಾಣೆಯ ಮೇಲೆ ಗುರಿಯಿಸಿರಿಸಿ ಉಗ್ರರು ದಾಳಿ ನಡೆಸಿದಾರೆ.
ಪೀರ್ ಇಸ್ಮಾಯಿಲ್ ಝಿಯಾರತ್ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ 4ರಿಂದ 5 ಉಗ್ರರು ಸಾವನ್ನಪ್ಪಿದ್ದು, ಉಳಿದ ಎಂಟು ಮಂದಿ ಗಾಯಗೊಂಡಿದ್ದಾರೆ. ಘರ್ಷಣೆ ಯಲ್ಲಿ ಪಾಕ್ ಸೇನಾ ಪಡೆಯ ನಾಲ್ವರು ಸೈನಿಕರು ಕೂಡಾ ಸಾವನ್ನಪ್ಪಿದ್ದು ಇತರ ಆರು ಮಂದಿ ಯೋಧರು ಗಾಯಗೊಂಡಿದ್ದಾರೆ.
ಇದಾದ ಕೆಲವೇ ತಾಸುಗಳ ಬಳಿಕ ಕ್ವೆಟ್ಟಾ ಸಮೀಪದ ಟುರ್ಬಾಟ್ನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಸುಧಾರಿತ ಸ್ಫೋಟ ಸಾಧನವನ್ನು ಒಯ್ಯುತ್ತಿದ್ದ ಪಾಕ್ ಅರೆಸೇನಾ ಪಡೆಯ ವಾಹನವನ್ನು ಗುರಿಯಿರಿಸಿ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಬಲೂಚಿಸ್ತಾನದಲ್ಲಿ ಪ್ರತ್ಯೇಕವಾದಿ ಗುಂಪುಗಳು ಪಾಕ್ ಭದ್ರತಾ ಪಡೆಗಳ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ತಮ್ಮ ದಾಳಿನ್ನು ತೀವ್ರಗೊಳಿಸಿವೆ.





