ದ.ಕ. ಜಿಲ್ಲೆಯಲ್ಲಿ ಸಾಧಾರಣ ಮಳೆ
ಮಂಗಳೂರು, ಜೂ.1: ದ.ಕ. ಜಿಲ್ಲೆಯ ಹಲವು ಕಡೆ ಮಂಗಳವಾರ ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ, ಕಡಬ ತಾಲೂಕಿನ ಹಲವು ಕಡೆ ಬೆಳಗ್ಗಿನಿಂದಲೇ ಮಳೆ ಸುರಿದಿದ್ದರೆ, ಮಂಗಳೂರಿನಲ್ಲಿ ಸಂಜೆಯ ಹೊತ್ತು ಕೆಲಕಾಲ ಮಳೆಯಾಗಿದೆ. ಮಂಗಳೂರು ನಗರ, ಹೊರವಲಯದ ಬಹುತೇಕ ಕಡೆ ಸಂಜೆಯವರೆಗೆ ಬಿಸಿಲ ವಾತಾವರಣವಿತ್ತು.
ಹವಾಮಾನ ಇಲಾಖೆಯು ಪಶ್ಚಿಮ ಕರಾವಳಿಯಲ್ಲಿ ಜೂ.3ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಮಂಗಳವಾರ ಗರಿಷ್ಠ ತಾಪಮಾನ 30.8 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಈ ಬಾರಿಯ ಪೂರ್ವ ಮುಂಗಾರಿನಲ್ಲಿ ದ.ಕ. ಜಿಲ್ಲೆಯಲ್ಲಿ ವಾಡಿಕೆಗಿಂತ ಭಾರೀ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ 536.1 ಮಿ.ಮೀ. (ವಾಡಿಕೆ 236.6 ಮಿ.ಮೀ) ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ.127ರಷ್ಟು ಹೆಚ್ಚಿದೆ.
Next Story





