ಮಂಗಳೂರು: ವಿವಿಧ ಕಡೆ ಲಾಕ್‌ಡೌನ್ ಉಲ್ಲಂಘನೆ ಆರೋಪ; ಪ್ರಕರಣ ದಾಖಲು
ಮಂಗಳೂರು, ಜೂ.1: ನಗರ ವ್ಯಾಪ್ತಿಯಲ್ಲಿ ಕೊರೋನ ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಉರ್ವ ಕೊಟ್ಟಾರ ಚೌಕಿ ಇನ್ ಪೋಸಿಸ್ ಬಳಿಯ ಮಲ್ಲಿನಾಥ್ ಹಾರ್ಡ್ ವೇರ್ ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಪಾಯಿಂಟ್ ಎಂಬ ಹೆಸರಿನ ಅಂಗಡಿಯ ಶಟರ್ ತೆರೆದು ನಿಗದಿತ ಸಮಯ ಕಳೆದರೂ ವ್ಯಾಪಾರ ಮಾಡಿಕೊಂಡಿದ್ದ ಗುಜರಾತ್‌ನ ದಿನೇಶ್ ಎಂಬಾತನ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಳೂರು ಅಯ್ಯಪ್ಪಗುಡಿಯ ಚೆಕ್ ಪಾಯಿಂಟ್ ಬಳಿ ಕಾರಿನಲ್ಲಿ ಸರಿಯಾಗಿ ಮಾಸ್ಕ್ ಧರಿಸದೆ ದೈಹಿಕ ಅಂತರ ಪಾಲಿಸದೆ ಕುಳಿತಿದ್ದವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿನ್ಯ ಗ್ರಾಮದ ಮಾಧವಪುರ ಬಸ್ ನಿಲ್ದಾಣದ ಬಳಿ ಮೂರು ದ್ವಿಚಕ್ರ ವಾಹನಗಳಲ್ಲಿ ತಿರುಗಾಡುತ್ತಿದ್ದ ಮೂವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ತಾಪಂ ಕಚೇರಿ ಬಳಿಯ ಜ್ಯೂಸ್ ಸೆಂಟರ್‌ನಲ್ಲಿ ಲಾಕ್‌ಡೌನ್ ವಿನಾಯಿತಿ ಅವಧಿಯ ಬಳಿಕವೂ ಕಾರ್ಯ ನಿರ್ವಸುತ್ತಿದ್ದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲಕನ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







