ಐಸಿಎಐ ಮಂಗಳೂರು ವತಿಯಿಂದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್

ಮಂಗಳೂರು, ಜೂ.1: ಭಾರತೀಯ ಲೆಕ್ಕ ಪರಿಶೋಧಕರ ಸಂಘ ಮಂಗಳೂರು ಹಾಗು ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯ ಜಂಟಿ ಸಹಯೋಗದೊಂದಿಗೆ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ಗೆ ಚಾಲನೆ ನೀಡಲಾಯಿತು.
ಸಿಎ ಸದಸ್ಯರು, ವಿದ್ಯಾರ್ಥಿಗಳು ಹಾಗು ಅವರ ಕುಟುಂಬಸ್ಥರು ಈ ವ್ಯಾಕ್ಸಿನೇಷನ್ ಡ್ರೈವ್‌ನ ಅನುಕೂಲ ಪಡೆದರು.
ಈ ಸಂದರ್ಭ ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ. ದಿಲೀಪ್ ನಾಯಕ್, ಡಾ. ಶಾಜಿರ್ ಸಿದ್ದೀಕಿ, ಸಂಘದ ಅಧ್ಯಕ್ಷ ಸಿಎ ಕೆ.ಎಸ್. ಕಾಮತ್, ನಿಕಟಪೂರ್ವ ಅಧ್ತಕ್ಷ ಸಿಎ ಎಸ್.ಎಸ್. ನಾಯಕ್, ಐಸಿಎಐ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿಎ ಗೌತಮ್ ಪೈ, ಸಿಎ ಸಚಿನ್ ಎಸ್. ನಾಯಕ್, ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು.
Next Story





