ಬನ್ನೆಂಗಳ ಕಿರು ಸೇತುವೆ ದುರಸ್ಥಿಗೆ ಇಳಂತಿಲ, ಬಾರ್ಯ ಪಂಚಾಯತ್ ನಿಂದ ಅನುದಾನದ ಭರವಸೆ

ಜೋಗಿಬೊಟ್ಟು: ಇಳಂತಿಲ ಹಾಗೂ ಬಾರ್ಯ ಗ್ರಾಮದ ಕೊಂಡಿಯಾಗಿರುವ ಬನ್ನೆಂಗಳ ಕಿರು ಸೇತುವೆಯ ದುರಸ್ತಿ ಮತ್ತು ಅಗಲೀಕರಣ ಮಾಡುವಂತೆ ಜೋಗಿಬೆಟ್ಟು ಹೆಲ್ಪ್ ಡೆಸ್ಕ್ ಸದಸ್ಯರ ಮುಖಾಂತರ ಎರಡು ಗ್ರಾಮ ಪಂಚಾಯತಿನ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ಮೂರು ದಿನಗಳ ಹಿಂದೆ ಇಳಂತಿಲ ಹಾಗೂ ಬಾರ್ಯ ಗ್ರಾಮ ಪಂಚಾಯತಿನ ಕೊಂಡಿಯಾಗಿರುವ ಕಿರು ಸೇತುವೆಯ ದುರಸ್ತಿ ಹಾಗೂ ಅಗಲೀಕರಣ ಮಾಡುವಂತೆ ಹೆಲ್ಪ್ ಡೆಸ್ಕ್ ಸದಸ್ಯರು ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಇಳಂತಿಳ ಪಂಚಾಯತ್ ಸ್ಥಳೀಯ ಆಡಳಿತ ಇಂದು ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಭಟ್ ಸ್ಥಳಕ್ಕೆ ಭೇಟಿಕೊಟ್ಟು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಹಾಗೂ ಸ್ವಚ್ಛತೆಯ ಸೂಚನ ಫಲಕವನ್ನು ಅಳವಡಿಸುತ್ತೆ ಎಂದು ಭರವಸೆ ನೀಡಿದರು.
ಬಾರ್ಯ ಗ್ರಾಮದ ನಾಗರೀಕರ ಪರವಾಗಿ ಗುಣಕರ ಅಗ್ನಾಡಿ ಹಾಗೂ ಪರಮೇಶ್ವರ್ ಬನ್ನೆಂಗಳರವರು ಬಾರ್ಯ ಗ್ರಾಮ ಪಂಚಾಯತಿನ ಅಧ್ಯಕ್ಷೆ ಉಷಾ ಶರತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಡೆಗೋಡೆ ನಿರ್ಮಿಸಲು 40,000 ರೂ. ಅನುದಾನವನ್ನು ನೀಡಿ ಆದಷ್ಟು ಬೇಗ ಕೆಲಸ ಕಾರ್ಯವನ್ನು ಮುಗಿಸಿ ಕೊಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಸಿದ್ದೀಕ್, ಜೋಗಿಬೊಟ್ಟು ಹೆಲ್ಪ್ ಡೆಸ್ಕ್ ತಂಡದ ಸದಸ್ಯರುಗಳಾದ ಜಾಫರ್, ಎಂ.ಜಿ.ರಫೀಕ್, ಇಕ್ಬಾಲ್, ಸಿದ್ದೀಕ್, ಸಾಬಿತ್, ಮಹಮ್ಮದ್ ಆಲಿ, ಜುಬೈರ್ ಪಿಲಿಗೂಡು ಉಪಸ್ಥಿತರಿದ್ದರು.







.jpeg)
.jpeg)



.jpeg)

