ಉಡುಪಿ ಜಿಲ್ಲೆಯಲ್ಲಿ ಲಸಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಕೊಡುವ ಬಗ್ಗೆ ಗಮನಕ್ಕೆ ಬಂದಿದೆ: ಪ್ರಕಾಶ ರಾಠೋಡ

ಮಂಗಳೂರು : ರಾಜ್ಯ ಸರಕಾರ ಟಾಸ್ಕ್ ಪೋಸ್೯ ಮಾಡಿ ಪ್ರತಿ ಜಿಲ್ಲೆಗಳಲ್ಲಿ ವ್ಯಾಕ್ಸಿನ್ ವಿತರಣೆ ಮಾಡುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯನ್ನು ಕೇವಲ ಬಿಜೆಪಿ ಕಾಯ೯ಕತ೯ರಿಗೆ ಮಾತ್ರ ಕೊಡುವ ವ್ಯವಸ್ಥೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ವಕ್ತಾರರಾದ ಪ್ರಕಾಶ ರಾಠೋಡ ಹೇಳಿಕೆ ನೀಡಿದ್ದಾರೆ.
ನಂತರ ಮಾತನಾಡಿದ ಅವರು ಬೆಂಗಳೂರು, ಮಂಗಳೂರಿನಲ್ಲಿಯೂ ಇದೇ ತರಹ ನಡೆಯುತ್ತಿದೆ. ಈ ತರಹ ತಾರತಮ್ಯ ಟಾಸ್ಕ್ ಪೋಸ್೯ ಮೂಲಕ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಒತ್ತಡ ಮಾಡಿ ಲಸಿಕೆಯನ್ನು ಹಂಚುತ್ತಾ ಇದ್ದಾರೆ. ಇದರಿಂದ ದೊಡ್ಡ ಸಮಸ್ಯೆ ಉಂಟಾಗುತ್ತಿದ್ದು, ಇದನ್ನು ತಡೆದು ಪಾರದಶ೯ಕವಾಗಿ ಲಸಿಕೆಯನ್ನು ನೀಡಬೇಕೆಂದು ಪ್ರಕಾಶ ರಾಠೋಡ ಒತ್ತಾಯಿಸಿದರು.
ಮಕ್ಕಳಿಗೆ ಕೋವಿಡ್ ಪಾಸಿಟಿವ್ ಕೇಸ್ ಗಳು ವಿಜಯಪುರ, ಬೆಳಗಾವಿ ಹಾಗೂ ಶಿವಮೊಗ್ಗ ದಲ್ಲಿ ಕಂಡುಬಂದಿವೆ. ಇದನ್ನು ತಡೆಯಲು ಸರ್ಕಾರ ವಿಳಂಬ ಮಾಡುತ್ತಿದೆ. ಪ್ರತಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ನೇಮಿಸಿರುವ ಟಾಸ್ಕ್ ಪೋರ್ಸ್ ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಲಸಿಕೆ ಕೊಡುವುದನ್ನು ಕೂಡಲೇ ನಿಲ್ಲಿಸಿ ಎಲ್ಲಾ ಜನರಿಗೆ ನೀಡಬೇಕೆಂದು ಅವರು ಒತ್ತಾಯಿಸಿದರು.
ಎಪ್ರಿಲ್ 20 ರಿಂದ ಮೇ 16 ರವರೆಗೆ ದೇಶದಲ್ಲಿ ಪತ್ರಿಕೆ ಮತ್ತು ಟಿ.ವಿ ಮಾಧ್ಯಮದ 238 ಜನ ಕೋವಿಡ್ ಸೋಂಕಿನಿಂದ ಮರಣ ಹೊಂದಿರುವ ಪಟ್ಟಿ ನೋಡಿದ್ದೀರಿ. ನಮ್ಮ ರಾಜ್ಯದಲ್ಲಿ ಹಿರಿಯ ಪತ್ರಕತ೯ರಾದ ಮಹಾದೇವ ಪ್ರಕಾಶ ಹಾಗೂ ಜಯಕೀತಿ೯ ಕದಲ್ ರವರು ಹಾಗು ಇತರ ಹಲವಾರು ಪತ್ರಕತ೯ರು ಜೀವ ಕಳೆದುಕೊಂಡಿದ್ದಾರೆ. ಕೋವಿಡ್ ನಿಂದ ಮರಣ ಹೊಂದಿದವರ ಕುಟುಂಬಗಳಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸಕಾ೯ರ ಮತ್ತು ರಾಜ್ಯ ಸಕಾ೯ರ 10 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಕಾ೯ರ ಇದೇ ಸಂದಭ೯ದಲ್ಲಿ ಇನ್ನೊಂದು ಘೋಷಣೆ ಮಾಡಿದೆ. ಕೋವಿಡ್ ನಿಂದ ಮರಣಹೊಂದಿದ ಅನಾಥ ಮಕ್ಕಳಿಗೆ 23 ವಷ೯ದ ನಂತರ 10 ರೂ. ಲಕ್ಷ ಕೊಡುತ್ತೇವೆ ಎಂದು ಹೇಳಿದ್ದಾರೆ. 23 ವಷ೯ದವರೆಗೂ ಈ ಪ್ರಧಾನ ಮಂತ್ರಿ ಇರುತ್ತಾರೋ ? ಇಲ್ಲವೋ? ಎಂದು ಅವರು ಟೀಕಿಸಿದರು. ಇಂತಹ ಅವೈಜ್ಞಾನಿಕ ನಿಯಮವನ್ನು ಮಾಡಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿಗೆ ಪತ್ರ ಬರೆದು ಅನಾಥ ಮಕ್ಕಳಿಗೆ ಕೇಂದ್ರಿಯ ವಿದ್ಯಾಲಯದಲ್ಲಿ ಉಚಿತವಾಗಿ ಶಿಕ್ಷಣ ನೀಡಬೇಕೆಂದು ಒತ್ತಾಯಿಸಿದರು. ಅದನ್ನು ಕೂಡ ಜಾರಿಗೆ ತರಬೇಕೆಂದು ಪ್ರಕಾಶ ರಾಠೋಡ ಒತ್ತಾಯಿಸಿದರು.
ಈ ಸಂದಭ೯ ಲೋಕಸಭೆಯ ಮಾಜಿ ಸಂಸದರಾದ ಉಗ್ರಪ್ಪ ಹಾಗೂ ರಾಮಚಂದ್ರಪ್ಪ ಉಪಸ್ಥಿತರಿದ್ದರು.







