ದ.ಕ.ಜಿಲ್ಲೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ
ಮಂಗಳೂರು, ಜೂ. 2: ದ.ಕ.ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮಂಗಳೂರು ನಗರ ಉತ್ತರ ಸಂಚಾರ ಪೊಲೀಸ್ ಠಾಣೆಯ ಮೋಹನ ಕೊಟ್ಟಾರಿ ಅವರನ್ನು ರೈಲ್ವೆ ಪೊಲೀಸ್ ಠಾಣೆಗೆ, ದ.ಕ. ಜಿಲ್ಲಾ ಡಿಎಸ್‌ಬಿಗೆ ವರ್ಗಾವಣೆ ಆದೇಶದಲ್ಲಿದ್ದ ಮಂಜಪ್ಪರಾಮಕೊಂಡಾಡಿ ಅವರನ್ನು ಕರಾವಳಿ ಕಾವಲು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಬೆಳ್ತಂಗಡಿ ಠಾಣೆಯ ಸಂದೇಶ್ ಪಿ.ಜಿ. ಅವರನ್ನು ಬಜ್ಪೆಪೊಲೀಸ್ ಠಾಣೆಗೆ, ಉರ್ವ ಠಾಣೆಯ ಮುಹಮ್ಮದ್ ಶರೀಫ್ ಅವರನ್ನು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಗೆ, ಉಡುಪಿ ಸಿಇಎನ್ ಠಾಣೆಯ ರಾಮಚಂದ್ರ ನಾಯಕ್ ಅವರನ್ನು ದ.ಕ. ಜಿಲ್ಲಾ ಡಿಎಸ್‌ಬಿಗೆ, ಮಂಗಳೂರು ಉತ್ತರ ಠಾಣೆಯ ಗೋಂದರಾಜು ಬಿ. ಅವರನ್ನು ಐಎಸ್‌ಡಿಗೆ ಹಾಗೂ ಮಂಗಳೂರು ಉತ್ತರ ಠಾಣೆಗೆ ರಾಘವೇಂದ್ರ ಎಂ.ಬೈಂದೂರು ಅವರನ್ನು ವರ್ಗಾಯಿಸಿ ಆದೇಶಿಸಲಾಗಿದೆ.
Next Story





