ದೇಶಾದ್ಯಂತ ಬಾಡಿಗೆ ಮನೆಗಳ ಕುರಿತ ಕಾನೂನು ಪರಿಷ್ಕರಣೆಗೆ ನೂತನ ಕಾಯ್ದೆ: ಕೇಂದ್ರ ಸಂಪುಟ ಅಸ್ತು

ಫೈಲ್ ಚಿತ್ರ
ಹೊಸದಿಲ್ಲಿ,ಜೂ.2: ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಮಾದರಿ ಬಾಡಿಗೆ ಕಾಯ್ದೆಗೆ ಒಪ್ಪಿಗೆಯನ್ನು ನೀಡಿದೆ. ದೇಶಾದ್ಯಂತ ಬಾಡಿಗೆ ಮನೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಕಾನೂನುಗಳನ್ನು ಪರಿಷ್ಕರಿಸಲು ಈ ಕಾಯ್ದೆಯು ನೆರವಾಗಲಿದೆ.
ಈ ಕಾಯ್ದೆಯು ಮನೆಗಳ ಭಾರೀ ಕೊರತೆಯನ್ನು ನೀಗಿಸಲು ಮನೆ ಬಾಡಿಗೆ ಕ್ಷೇತ್ರವನ್ನು ಉದ್ಯಮವನ್ನಾಗಿಸಿ ಖಾಸಗಿಯವರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಮಾದರಿ ಕಾಯ್ದೆಯನ್ನು ಆಧರಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಸದಾಗಿ ಬಾಡಿಗೆ ಕಾನೂನನ್ನು ರೂಪಿಸಿಕೊಳ್ಳಬಹುದು ಅಥವಾ ಹಾಲಿ ಇರುವ ಬಾಡಿಗೆ ಕಾನೂನುಗಳಲ್ಲಿ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು ಎಂದು ತಿಳಿಸಿರುವ ಹೇಳಿಕೆಯು,ಕಾಯ್ದೆಯು ಬಾಡಿಗೆ ವಸತಿ ಮಾರುಕಟ್ಟೆಯನ್ನು ಸೃಷ್ಟಿಸುವ ಮೂಲಕ ಬಾಡಿಗೆ ವಸತಿ ಕ್ಷೇತ್ರವನ್ನು ಸಾಂಸ್ಥಿಕಗೊಳಿಸಲಿದೆ ಎಂದಿದೆ.
ದೇಶದಲ್ಲಿ ಸುಸ್ಥಿರ ಬಾಡಿಗೆ ವಸತಿ ಮಾರುಕಟ್ಟೆಯನು ಸೃಷ್ಟಿಸಲು ಕಾಯ್ದೆಯು ಉದ್ದೇಶಿಸಿದೆ. ಎಲ್ಲ ಆದಾಯ ವರ್ಗದವರಿಗೂ ಸಾಕಷ್ಟು ಬಾಡಿಗೆ ವಸತಿಗಳನ್ನು ಲಭ್ಯವಾಗಿಸುವ ಮೂಲಕ ವಸತಿಹೀನರ ಸಮಸ್ಯೆಯನ್ನು ಬಗೆಹರಿಸುತ್ತದೆ. ಅದು ಖಾಲಿಯಿರುವ ಮನೆಗಳು ಬಾಡಿಗೆಗೆ ಲಭ್ಯವಾಗುವಂತೆ ಮಾಡುತ್ತದೆ ಎಂದೂ





