ಮಾಲಕನ ನಿರ್ಲಕ್ಷ್ಯ ದಿಂದ ಕೆಲಸಗಾರ ಮೃತ್ಯು ಆರೋಪ : ದೂರು
ಬಂಟ್ವಾಳ, ಜೂ. 2: ಮಾಲಕನ ನಿರ್ಲಕ್ಷ್ಯ ದಿಂದ ಕೆಲಸಗಾರನೋರ್ವ ಮೃತಪಟ್ಟ ಘಟನೆ ನಡೆದಿದೆ, ಹಾಗಾಗಿ ಕಾರ್ಮಿಕನ ಸಾವಿಗೆ ಮಾಲಕನೇ ಕಾರಣವಾಗಿದ್ದು ಆತನ ಮೇಲೆ ಕಾನೂನು ಕ್ರಮಕೈಗೊಳ್ಳಿ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ಲೈ ವುಡ್ ಫ್ಯಾಕ್ಟರಿಗೆ ಸಿಮೆಂಟ್ ಸೀಟು ಹಾಕುವ ವೇಳೆ ಓರ್ವ ಕಾರ್ಮಿಕ ಸೀಟು ತುಂಡಾಗಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ಇನ್ನೊಬ್ಬ ಕಾರ್ಮಿಕ ನಿಗೆ ಕೈಗೆ ಗಾಯಗೊಂಡಿದೆ. ಘಟನೆಯಲ್ಲಿ ಅಬೂಬಕ್ಕರ್ ಸಿದ್ದಿಕ್(68) ಮೃತಪಟ್ಟ ವ್ಯಕ್ತಿಯಾಗಿದ್ದು , ಗಾಯಾಳು ನಂದಾವರ ನಿವಾಸಿ ಇಬ್ರಾಹಿಂ ಖಲೀಲ್ (24) ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Next Story





