ಪರಿಪೂರ್ಣ ವಿದ್ಯೆಯನ್ನು ಪಡೆದು ಸಾರ್ಥಕ ಜೀವನ ನಡೆಸಬೇಕು : ಮಹಮ್ಮದ್ ಇರ್ಫಾನಿ ಫೈಝಿ ಕಲ್ಲಡ್ಕ

ಬಂಟ್ವಾಳ : ವಿದ್ಯೆ ಇಲ್ಲದ ಜೀವನ ಪರಿಪೂರ್ಣತೆ ಕಾಣಲು ಸಾಧ್ಯವಿಲ್ಲ. ಪರಿಪೂರ್ಣ ವಿದ್ಯೆಯನ್ನು ಪಡೆದು ಸಾರ್ಥಕ ಜೀವನ ನಡೆಸಿರಿ ಎಂದು ಕಲ್ಲಡ್ಕ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಫೈಝಿ ಆನ್ ಲೈನ್ ಧಾರ್ಮಿಕ ಮದ್ರಸ ಶಿಕ್ಷಣಕ್ಕೆ ಚಾಲನೆ ನೀಡುತ್ತಾ ಹೇಳಿದರು.
ಮದ್ರಸ ಸದರ್ ಬಿ. ಟಿ. ಇಕ್ಬಾಲ್ ದಾರಿಮಿ ಸ್ವಾಗತಿಸಿ ಮಾತಾಡುತ್ತಾ ರಕ್ಷಕರು, ಹೆತ್ತವರು ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಿದ್ದಾದಲ್ಲಿ ಮುಂದಿನ ದಿನಗಳಲ್ಲಿ ದುರಂತ ಕಟ್ಟಿಟ್ಟ ಬುತ್ತಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಲ್ಲಡ್ಕ ಮುಹಿಯ್ಯು ದ್ದೀನ್ ಜುಮಾ ಮಸೀದಿಯ ಗೌರವ ಅಧ್ಯಕ್ಷರಾದ ಮಹಮ್ಮದ್ ಹಾಜಿ ವಹಿಸಿದರು. ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಸಾದಿಕ್, ಸದಸ್ಯರಾದ ಅಬೂಬಕ್ಕರ್, ಜವಾಝ್, ನವಾಝ್, ಅಬ್ಬುಲ್ ಹಮೀದ್, ಹಾಗೂ ಮದ್ರಸ ಶಿಕ್ಷಕರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.







.jpeg)




