ಕುಸ್ತಿಪಟು ಹತ್ಯೆ ಪ್ರಕರಣ: ಒಲಿಂಪಿಯನ್ ಸುಶೀಲ್ ಕುಮಾರ್ ಗೆ 14 ದಿನಗಳ ನ್ಯಾಯಾಂಗ ಕಸ್ಟಡಿ

ಹೊಸದಿಲ್ಲಿ: ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ದಿಲ್ಲಿ ನ್ಯಾಯಾಲಯ ಬುಧವಾರ 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ.
ದಿಲ್ಲಿ ಪೊಲೀಸರು ನ್ಯಾಯಾಲಯವನ್ನು ಸಂಪರ್ಕಿಸಿ, ಕುಸ್ತಿಪಟುವಿನ ಬಂಧನವನ್ನು ಇನ್ನೂ ಮೂರು ದಿನಗಳವರೆಗೆ ವಿಸ್ತರಿಸುವಂತೆ ಕೋರಿದ್ದರು. ಆದರೆ ಅದನ್ನು ನಿರಾಕರಿಸಲಾಯಿತು.
ದಿಲ್ಲಿ ಪೊಲೀಸರಿಂದ ಮಾರಣಾಂತಿಕ ದಾಳಿಯ 'ಮಾಸ್ಟರ್ ಮೈಂಡ್' ಎಂದು ಕರೆಯ ಲ್ಪಡುವ ಅಂತರ್ ರಾಷ್ಟ್ರೀಯ ಕುಸ್ತಿಪಟು ಕುಮಾರ್ ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯ ಕೊನೆಗೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ದಿಲ್ಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಕುಸ್ತಿಪಟು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ, ಕುಮಾರ್ ನನ್ನು ಮೇ 23 ರಂದು ಬಂಧಿಸಲಾಯಿತು. ಆತನ ಬಂಧನದ ನಂತರ ನ್ಯಾಯಾಲಯ ಆತನನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ವಿಧಿಸಿತ್ತು, ನಂತರ ಅದನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು.
ಸುಶೀಲ್ ಕುಮಾರ್ ಹಾಗೂ ಅವರ ಸಹಚರರು ಮೇ 4 ಮತ್ತು 5 ರ ಮಧ್ಯರಾತ್ರಿ ಕುಸ್ತಿಪಟು ಸಾಗರ್ ಧಂಕರ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ಘಟನೆಯ ನಂತರ ಸಾಗರ್ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದರು,







