ಬಸ್ತಿಪಡ್ಪು ನಾಗರಿಕ ಸಮಿತಿ ವತಿಯಿಂದ ಪರಿಸರ ಸ್ವಚ್ಛತೆಗಾಗಿ ಜಾಗೃತಿ ಅಭಿಯಾನ

ಉಳ್ಳಾಲ : ಇತ್ತೀಚಿನ ದಿನಗಳಲ್ಲಿ ರಸ್ತೆ ಬದಿಗಳಲ್ಲಿ ಕಸಗಳನ್ನು ಎಸೆಯುವುದು ಕಂಡು ಬರುತ್ತಿದ್ದು, ಇದನ್ನು ತಡೆಗಟ್ಟಲು ಬಸ್ತಿಪಡ್ಪು ನಾಗರಿಕ ಸಮಿತಿ ವತಿಯಿಂದ ಪರಿಸರ ಸ್ವಚ್ಛತೆಗಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಉಳ್ಳಾಲ ನಗರಸಭೆ ಅಧ್ಯಕ್ಷರಾದ ಚಿತ್ರಕಲಾ ಚಂದ್ರಕಾಂತ್ ಮಾತನಾಡಿ ಉಳ್ಳಾಲ ನಗರಸಭೆ ವ್ಯಾಪ್ತಿಯ ಜನರು ನಮ್ಮೊಂದಿಗೆ ಕೈ ಜೋಡಿಸಿ ಕಸಗಳನ್ನು ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ನಗರಸಭೆಯ ವಾಹನಗಳಿಗೆ ನೀಡಿ ಸಹಕರಿಸಬೇಕೆಂದು ಹೇಳಿದರು.
ಉಳ್ಳಾಲ ಉಪಾಧ್ಯಕ್ಷ ಅಯ್ಯುಬ್ ಮಂಚಿಲ ಮಾತನಾಡಿ, ಉಳ್ಳಾಲ ನಗರಸಭೆ 31ವಾರ್ಡ್ಗಳಲ್ಲಿ ಸ್ವಚ್ಛತೆ ಮತ್ತು ಅಧಿಕಾರಿಗಳು ಶ್ರಮವನ್ನು ವಹಿಸುತ್ತಾ ಬಂದಿದ್ದಾರೆ ಆದರೆ ನಗರಸಭೆ ವ್ಯಾಪ್ತಿಯ 7 ಸ್ಥಳಗಳಲ್ಲಿ ಜನಸಾಮಾನ್ಯರು ಕಸಗಳನ್ನು ಎಸೆಯುತ್ತಿದ್ದು ಇದನ್ನು ತಡೆಗಟ್ಟಲು ಉಳ್ಳಾಲ ಪೌರಾಯುಕ್ತ ಅವರ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಿ ರಾತ್ರಿ ಮತ್ತು ಬೆಳಿಗ್ಗೆ ಕಸಗಳನ್ನು ಎಸೆಯುವ ಸ್ಥಳಗಳಲ್ಲಿ ಕಣ್ಗಾವಲು ಮಾಡಿರುವುದರಿಂದ ಸ್ಥಳಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯುವುದನ್ನು ಕಠಿವಾಣ ಮಾಡಲಾಗಿದೆ.
ಪೌರಾಯುಕ್ತ ರಾಯಪ್ಪ ಅವರು ಮಾತನಾಡಿ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ರಸ್ತೆ ಬದಿಗಳಲ್ಲಿ ಕಸ ಹಾಕಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ರೇಷ್ಮಾ ಜಗದೀಶ್ ಮತ್ತು ಸ್ಥಳೀಯ ಬಸ್ತಿಪಡ್ಪು ನಾಗರಿಕರು ಉಪಸ್ಥಿತರಿದ್ದರು. ತೌಸಿಫ್ ಕಾರ್ಯಕ್ರಮ ನಿರೂಪಿಸಿ, ಝೈದ್ ಸಲೀಂ ವಂದಿಸಿದರು.







.jpeg)

.jpeg)


.jpeg)

.jpeg)

