ಕಾಞ೦ಗಾಡ್ ನಗರಸಭಾ ಸದಸ್ಯ ಬಿನೀಶ್ ರಾಜ್ ನಿಧನ

ಕಾಸರಗೋಡು, ಜೂ.3: ಕಾಞ೦ಗಾಡ್ ನಗರಸಭಾ ಸದಸ್ಯ ಬಿನೀಶ್ ರಾಜ್( 42) ಬುಧವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಎದೆನೋವು ಕಾಣಿಸಿಕೊಂಡ ಬಿನೀಶ್ ರಾಜ್ ರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದರೆನ್ನಲಾಗಿದೆ.
ನಗರಸಭೆಯ 30ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯರಾಗಿದ್ದರು.
ದುಬೈಯ ಇನ್ ಕಾಸ್, ನಾಸ್ಕ್ ಯುಎಇ ಸಮಿತಿಯ ಸದಸ್ಯರಾಗಿದ್ದ ಬಿನೀಶ್ ರಾಜ್ ಗಲ್ಫ್ ಉದ್ಯೋಗ ಬಿಟ್ಟು ಕಳೆದ ಜೂನ್ ನಲ್ಲಿ ಊರಿಗೆ ಆಗಮಿಸಿದ್ದರು. ಕಳೆದ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
Next Story





