ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳಕ್ಕೆ ಅಗ್ರ ಸ್ಥಾನ

ಹೊಸದಿಲ್ಲಿ: ನೀತಿ ಆಯೋಗದ ಎಸ್‍ಡಿಜಿ ಇಂಡಿಯಾ ಇಂಡೆಕ್ಸ್ 2020-21 (ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕ)ದಲ್ಲಿ ಕೇರಳ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದೆ. ಅತ್ತ ಬಿಹಾರ ಅತ್ಯಂತ ಕಳಪೆ ನಿರ್ವಹಣೆಯೊಂದಿಗೆ ಕೊನೆಯ ಸ್ಥಾನದಲ್ಲಿದೆ ಎಂದು ಇಂದು ಬಿಡುಗಡೆಗೊಂಡ ವರದಿ ತಿಳಿಸಿದೆ.
ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಮಾನದಂಡಗಳ ಆಧಾರದಲ್ಲಿ ಎಸ್‍ಡಿಜಿ ಇಂಡಿಯಾ ಸೂಚ್ಯಂಕ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಪ್ರಥಮ ಸ್ಥಾನಿಯಾದ ಕೇರಳ ರಾಜ್ಯಕ್ಕೆ ದೊರೆತ ಅಂಕಗಳು 75 ಆಗಿದ್ದರೆ ಎರಡನೇ ಸ್ಥಾನದಲ್ಲಿರುವ ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ 74 ಅಂಕಗಳು ದೊರಕಿವೆ. ಬಿಹಾರ ಹೊರತಾಗಿ ಜಾರ್ಖಂಡ್ ಮತ್ತು ಅಸ್ಸಾಂ ಕೂಡ ಅತ್ಯಂತ ಕಳಪೆ ನಿರ್ವಹಣೆ ತೋರಿದ ರಾಜ್ಯಗಳಾಗಿವೆ.
ಎಸ್‍ಡಿಜಿ ಇಂಡೆಕ್ಸ್ ವರದಿಯನ್ನು ಇಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ.
Next Story