ಉರ್ಪೆಲ್ ಪಾದೆ: ಆಟೋ ರಿಕ್ಷಾ ಚಾಲಕರಿಗೆ ಐಸೋಲೇಷನ್ ಕಿಟ್ ವಿತರಣೆ

ಮೂಡುಬಿದಿರೆ, ಜೂ.3: ಇಲ್ಲಿನ ಉರ್ಪೆಲ್ ಪಾದೆ ಲೋಬೊ ಕಟ್ಟೆ ಬಳಿ ಆಟೋ ರಿಕ್ಷಾ ಚಾಲಕರಿಗೆ ಮಾಜಿ ಸಚಿವ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಯುವ ನಾಯಕ ಮಿಥುನ್ ರೈಯವರು ಆರೋಗ್ಯ ಔಷಧ ಕಿಟ್, ಐಸೋಲೇಷನ್ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಎಪಿಎಂಸಿ ಸದಸ್ಯ ಚಂದ್ರಹಾಸ್ ಸನಿಲ್, ಪುರಸಭಾ ಸದಸ್ಯರುಗಳಾದ ಸುರೇಶ್ ಕೋಟ್ಯಾನ್, ಸಂತೋಷ್ ಶೆಟ್ಟಿ, ಪುರಂದರ ದೇವಾಡಿಗ, ಕೊರಗಪ್ಪ, ಜೊಸ್ಸಿ ಮಿನೇಜಸ್, ಕರೀಂ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಸಾಮಾಜಿಕ ಜಾಲತಾಣ ಮುಖ್ಯಸ್ಥ ನಿತಿನ್ ಬೆಳುವಾಯಿ, ಪುರಸಭಾ ಮಾಜಿ ಅಧ್ಯಕ್ಷ ಸುಂದರ, ಮಾಜಿ ಸದಸ್ಯೆ ಮೇರಿ ಪಿರೇರ, ಮುಖಂಡರಾದ ಕಿರಣ್ ಕುಮಾರ್ ಬೆಳುವಾಯಿ, ಯುವ ಇಂಟಕ್ ಅಧ್ಯಕ್ಷ ಸಚಿನ್ ಮಡಿವಾಳ, ಅಬ್ದುಲ್ಲತೀಫ್, ಸತೀಶ್ ಭಂಡಾರಿ ಕರಿಂಜೆ, ಸುಂದರ ಸಿ. ಪೂಜಾರಿ, ಮೋನಕ್ಕ, ರವಿಕುಮಾರ್, ಕೆ.ಸಿ.ಗಣೇಶ್, ದಿಲೀಪ್ ಶೆಟ್ಟಿ, ಕುಮಾರ್ ಇರುವೈಲ್, ಸಂಜೀವ ಕೋಟ್ಯಾನ್, ಜಗನ್ನಾಥ ಭಟ್ ಐವನ್, ಸಿರಿಲ್, ದಾಮೋದರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.










